ಹೂಡೆ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2021-02-28 16:02 GMT

ಉಡುಪಿ, ಫೆ.28: ಜಮಾಅತೆ ಇಸ್ಲಾಮಿ ಹಿಂದ್ ತೋನ್ಸೆ-ಹೂಡೆ ಶಾಖೆ ವತಿಯಿಂದ ಹೂಡೆ ತೌಹೀದ್ ಮೊಹಲ್ಲಾದ ಮುಹಮ್ಮದ್ ಸಾಬ್ರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಶುಕ್ರವಾರ ಹಸ್ತಾಂತರಿಸಲಾಯಿತು.

ಮನೆಯ ಕೀಲಿಕೈಯನ್ನು ಮಹಮ್ಮದ್ ಸಾಬ್ರವರಿಗೆ ಜಮಾಅತೆ ಇಸ್ಲಾಮಿ ಹಿಂದ್ನ ಹಿರಿಯ ಸದಸ್ಯ ಮೌಲಾನ ಆದಮ್ ಸಾಹೇಬ್ ಸಾಂಕೇತಿಕವಾಗಿ ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತೋನ್ಸೆ ಗ್ರಾಪಂ ಮಾಜಿ ಅಧ್ಯಕ್ಷೆ ಫೌಝಿಯಾ ಸಾದಿಕ್, ಹಿರಿಯರಾದ ಬಾವಜಾನ್ ಸಾಹೇಬ್, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಕೆ.ಅಬ್ದುಲ್ ಕಾದಿರ್, ಗ್ರಾಪಂ ಸದಸ್ಯರಾದ ಕುಸುಮ, ಯಶೋದ, ಆಶಾ, ವಿಜಯ, ಡಾ.ಫಹೀಮ್ ಅಬ್ದುಲ್ಲಾ ಮೊದಲಾದವರು ಉಪಸ್ಥಿತವಿರಿದ್ದರು.

ಈವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಒಟ್ಟು ಹದಿನಾಲ್ಕು ಮನೆಗಳನ್ನು ನಿರ್ಮಿಸಿ ಹೂಡೆ ಪರಿಸರದ ಬಡವರಿಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News