×
Ad

ಚಹಾ ಮಾರುತ್ತಿದ್ದ ಬಗ್ಗೆ ಮುಚ್ಚುಮರೆ ಮಾಡದ ಪ್ರಧಾನಿ ಮೋದಿ: ಗುಲಾಂ ನಬಿ ಆಝಾದ್ ಶ್ಲಾಘನೆ

Update: 2021-02-28 22:12 IST

ಹೊಸದಿಲ್ಲಿ, ಫೆ.28: ಪ್ರಮುಖ ಪಕ್ಷವೊಂದರ ಮುಖಂಡನಾಗಿದ್ದರೂ ತನ್ನ ಭೂತಕಾಲದ ಜೀವನದ ಬಗ್ಗೆ ಮುಚ್ಚುಮರೆ ಮಾಡದ ಮಾದರಿ ವ್ಯಕ್ತಿ ಪ್ರಧಾನಿ ಮೋದಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಶ್ಲಾಘಿಸಿದ್ದಾರೆ.

ಹಲವು ನಾಯಕರ ಹಲವು ಗುಣಗಳನ್ನು ನಾನು ಮೆಚ್ಚುತ್ತೇನೆ. ನಾನು ಕೂಡಾ ಹಳ್ಳಿಯಿಂದ ಬಂದಿದ್ದು ಇದರ ಬಗ್ಗೆ ನನಗೆ ಹೆಮ್ಮೆಯಿದೆ. ನರೇಂದ್ರ ಮೋದಿಯವರೂ ತಾವು ಹಳ್ಳಿಯಿಂದ ಬಂದಿರುವುದಾಗಿ , ಚಹಾ ಮಾರುತ್ತಿದ್ದ್ದುದಾಗಿ ಹೇಳಿದ್ದಾರೆ. ರಾಜಕೀಯವಾಗಿ ನಾವು ವಿರೋಧಿಗಳಾಗಿರಬಹುದು, ಆದರೆ ಅವರು ತನ್ನ ಭೂತಕಾಲದ ವಾಸ್ತವವನ್ನು ಮರೆಮಾಚಿಲ್ಲ . ಭೂತಕಾಲದ ಬದುಕನ್ನು ಮರೆಮಾಚುವವರು ಭ್ರಮಾಲೋಕದಲ್ಲಿ ಜೀವಿಸುತ್ತಾರೆ ’ ಎಂದು ಆಝಾದ್ ಹೇಳಿದರು.

ತಾನು ಏನಾಗಿದ್ದೇನೋ ಆ ಬಗ್ಗೆ ವ್ಯಕ್ತಿ ಹೆಮ್ಮೆ ಪಟ್ಟುಕೊಳ್ಳಬೇಕು. ನಾನು ಹಲವು ದೇಶಗಳಿಗೆ ಪ್ರವಾಸ ಹೋಗಿದ್ದೇನೆ ಮತ್ತು ಅಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದೇನೆ. ಆದರೆ ನನ್ನ ಹಳ್ಳಿಗೆ ಹೋದಾಗ ಅಲ್ಲಿಯ ಮಣ್ಣಿನ ವಾಸನೆಯೇ ಅದ್ಭುತವಾಗಿದೆ. ಇದೊಂದು ವಿಭಿನ್ನ ಪರಿಮಳ’ ಎಂದು ಆಝಾದ್ ಹೇಳಿದರು.

ಈ ಮಧ್ಯೆ, ಕಾಂಗ್ರೆಸ್ ಒಗ್ಗೂಡಿ ನಿಂತು ವಿಭಜನಾತ್ಮಕ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News