ಪಾಪಿರಿನ್ ಚಾಂಪಿಯನ್

Update: 2021-03-01 05:04 GMT

  ಸಿಂಗಾಪುರ: ಆಸ್ಟ್ರೇಲಿಯದ ಅಲೆಕ್ಸಿ ಪಾಪಿರಿನ್ ಅವರು ರವಿವಾರ ಕಝಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು 4-6, 6-0, 6-2 ಸೆಟ್‌ಗಳಿಂದ ಮಣಿಸಿ ಸಿಂಗಾಪುರ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಮೊದಲ ಎಟಿಪಿ ಟೂರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

 ತಾನು ಈ ಪ್ರಶಸ್ತಿ ಗೆಲ್ಲಲು ಸಾಕಷ್ಟು ಶ್ರಮವಹಿಸಿರುವುದಾಗಿ ಪ್ರಶಸ್ತಿ ಜಯಿಸಿದ ಬಳಿಕ ಪಾಪಿರಿನ್ ತಿಳಿಸಿದರು.

 ‘‘ನನ್ನ ಸಾಧನೆಯ ಹಿಂದೆ ನನ್ನ ಕುಟುಂಬವೂ ಇದೆ. ಅವರು ನನಗಾಗಿ ತುಂಬಾ ತ್ಯಾಗ ಮಾಡಿ ದ್ದಾರೆ.ಪ್ರಶಸ್ತಿಯನ್ನು ಗೆಲ್ಲಲು ಅವರು ನನಗೆ ಪ್ರೋತ್ಸಾಹ ನೀಡಿದ್ದಾರೆ’’ ಎಂದು ಪಾಪಿರಿನ್ ಹೇಳಿದ್ದಾರೆ.

 ಸೆಮಿಫೈನಲ್‌ನಲ್ಲಿ ಮರಿನ್ ಸಿಲಿಕ್ ಅವರಿಗೆ ಆಘಾತ ನೀಡಿದ್ದ 21ರ ಹರೆಯದ ಪಾಪಿರಿನ್ ಆರಂಭ ನಿಧಾನವಾಗಿತ್ತು. ಆರಂಭಿಕ ಸೆಟ್‌ನ್ನು ಕೈಚೆಲ್ಲಿದ್ದರು. ಎರಡನೇ ಸೆಟ್‌ನಲ್ಲಿ ತ್ವರಿತ ಪ್ರತಿಕ್ರಿಯೆಯನ್ನು ನೀಡಿದರು. ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಮಾಜಿ ಜೂನಿಯರ್ ಫ್ರೆಂಚ್ ಓಪನ್ ಚಾಂಪಿಯನ್ ಪಾಪಿರಿನ್ ಕೊನೆಯ ಎರಡು ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮರ್ರೆ ರಿವರ್ ಓಪನ್‌ನಲ್ಲಿ ಬ್ರಿಟನ್ ಡಾನ್ ಇವಾನ್ಸ್ ಜಯಗಳಿಸಿದ ನಂತರ ಈ ವರ್ಷ ಚೊಚ್ಚಲ ಪ್ರಶಸ್ತಿ ಗೆದ್ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾಪಿರಿನ್ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News