ಐಸಿಎಸ್‌ಇ: ಮೇ 5ರಿಂದ 10ನೇ, ಎ. 8ರಿಂದ 12ನೇ ತರಗತಿಗೆ ಪರೀಕ್ಷೆ

Update: 2021-03-01 17:55 GMT

ಹೊಸದಿಲ್ಲಿ, ಮಾ. 1: ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯನ್ನು ಮೇ 5ರಿಂದ ಹಾಗೂ 12ನೇ ತರಗತಿ ಪರೀಕ್ಷೆಯನ್ನು ಎಪ್ರಿಲ್ 9ರಿಂದ ನಡೆಸಲಿದೆ. ಜುಲೈಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಐಸಿಎಸ್‌ಇ ಕಳೆದ ವರ್ಷ ಮಂಡಳಿ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಇಂಟರ್ನಲ್ ಅಸೆಸ್‌ಮೆಂಟ್ ಮೂಲಕ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲಾಗಿತ್ತು.

ನಾವು ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಆಯ್ಕೆ ನೀಡುವುದಿಲ್ಲ. ಇಂಟರ್ನಲ್ ಅಸೆಸ್‌ಮಂಟ್ ಮೂಲಕ ಅವರನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಶಿಕ್ಷಣ ಮಂಡಳಿ ಸುಪ್ರೀಂ ಕೋರ್ಟ್‌ಗೆ ಕಳೆದ ವರ್ಷ ಹೇಳಿತ್ತು. 10ನೇ ತರಗತಿ ಪರೀಕ್ಷೆ ಇಂಗ್ಲೀಷ್ ಪರೀಕ್ಷೆಯೊಂದಿಗೆ ಮೇ 5ರಂದು ಆರಂಭವಾಗಲಿದೆ. 12ನೇ ತರಗತಿ ಪರೀಕ್ಷೆ ಕಂಪ್ಯೂಟರ್ ಸಯನ್ಸ್ ಪ್ರಾಯೋಗಿಕ ಪರೀಕ್ಷೆಯೊಂದಿಗೆ ಎಪ್ರಿಲ್ 9ರಂದು ಆರಂಭವಾಗಲಿದೆ. ಬ್ಯುಸಿನಸ್ ಸ್ಟಡಿ ಪರೀಕ್ಷೆಯೊಂದಿಗೆ ಥಿಯರಿ ಪರೀಕ್ಷೆ ಮೇ 5ರಂದು ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News