×
Ad

ಕೋವಿಡ್ ಲಸಿಕೆಗೆ ನೋಂದಣಿ Co-WIN ಪೋರ್ಟಲ್ ಮೂಲಕ ಮಾತ್ರ: ಆರೋಗ್ಯ ಸಚಿವಾಲಯ

Update: 2021-03-01 23:40 IST

ಹೊಸದಿಲ್ಲಿ, ಫೆ. 28: 60ಕ್ಕಿಂತ ಮೇಲಿನ ವಯೋಮಾನದ ಹಾಗೂ ನಿರ್ದಿಷ್ಟ ಅಸ್ವಸ್ಥ ಸ್ಥಿತಿಯಲ್ಲಿರುವ 45ಕ್ಕಿಂತ ಮೇಲಿನ ವಯೋಮಾನದ ವ್ಯಕ್ತಿಗಳನ್ನು ಒಳಗೊಳಿಸುವ ಗುರಿಯೊಂದಿಗೆ ಎರಡನೇ ಹಂತದ ಕೋವಿಡ್-19 ಲಸಿಕೆ ನೀಡಿಕೆ ಹಾಗೂ ನೋಂದಣಿ ಸೋಮವಾರ ಆರಂಭವಾಗಿದೆ.

ಲಸಿಕೆ ಪಡೆಯಲು ತಮಗೆ ನೋಂದಣಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರತಿಪಾದಿಸಿ ಫಲಾನುಭವಿಗಳು ಮೊದಲ ದಿನವೇ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವಾಲಯ, ಕೋವಿಡ್ ಲಸಿಕೆಗೆ ನೋಂದಣಿ ಹಾಗೂ ಭೇಟಿಗೆ ಕಾಯ್ದಿರಿಸುವಿಕೆ Co-WIN ಪೋರ್ಟಲ್ cowin.gov.in ಮೂಲಕ ಮಾಡಬೇಕು. ಫಲಾನುಭವಿ ನೋಂದಣಿಗೆ ಯಾವುದೇ Co-WIN ಲಭ್ಯವಿಲ್ಲ. ಪ್ಲೇಸ್ಟೋರ್‌ನಲ್ಲಿರುವ ಈ ಆ್ಯಪ್ ಕೇವಲ ನಿರ್ವಾಹಕರಿಗೆ ಮಾತ್ರ ಎಂದು ಅದು ಹೇಳಿದೆ.

ಮಾರ್ಚ್ 1ರಿಂದ ಸ್ಲಾಟ್‌ಗಳು ಬೆಳಗ್ಗೆ 9ರಿಂದ ಅಪರಾಹ್ನ 3 ಗಂಟೆ ವರೆಗೆ ತೆರೆದಿರಲಿದೆ. ಅಪರಾಹ್ನ 3 ಗಂಟೆಗಿಂತ ಮುನ್ನ ಭೇಟಿಯನ್ನು ಕಾಯ್ದಿರಿಸಬಹುದು ಎಂದು ಸಚಿವಾಲಯ ಹೇಳಿದೆ. ಸರಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಿದೆ. ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಒಂದು ಡೋಸ್‌ಗೆ 250 ರೂಪಾಯಿ ಗರಿಷ್ಠ ಮಿತಿಯ ಶುಲ್ಕದ ಒಳಗೆ ಲಭ್ಯವಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News