ಬ್ಲಡ್ ಡೋನರ್ಸ್ ಮಂಗಳೂರು : ನೂತನ ಸಮಿತಿ ರಚನೆ

Update: 2021-03-03 16:13 GMT
ಸಿದ್ದೀಕ್ ಮಂಜೇಶ್ವರ, ನವಾಝ್ ಕಲ್ಲರಕೊಡಿ, ಹಮೀದ್ ಪಜೀರ್

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವಾರ್ಷಿಕ ಮಹಾಸಭೆಯು ಉಳ್ಳಾಲ ಸಯ್ಯದ್ ಮದನಿ ಸಭಾಂಗಣದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಸಿದ್ದೀಕ್ ಮಂಜೇಶ್ವರ, ಉಪಾಧ್ಯಕ್ಷರಾಗಿ ಅಶ್ರಫ್ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಕಲ್ಲರಕೊಡಿ, ಕೋಶಾಧಿಕಾರಿಯಾಗಿ ಹಮೀದ್ ಪಜೀರ್, ಕಾರ್ಯದರ್ಶಿಯಾಗಿ ರಝಾಕ್ ಸಾಲ್ಮರ, ಜೊತೆ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಕಾಶಿಪಟ್ನ, ನೇಮಕಗೊಂಡರು.

ಸಮಿತಿ ಸದಸ್ಯರಾಗಿ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಫಾರೂಕ್ ಜ್ಯೂಸ್ ರೋಮ್ಯಾಂಟಿಕ್, ಫಾರೂಕ್ ಬಿಗ್ ಗ್ಯಾರೇಜ್, ಮೊಯ್ದು ಸೀತಂಗೊಳಿ, ಫೈಯಾಝ್ ಮಾಡೂರು, ಫಯಾಝ್ ಮೊಂಟೆಪದವು, ತೌಫಿಕ್ ಕುಲಾಯಿ, ಇಮ್ರಾನ್ ಉಪ್ಪಿನಂಗಡಿ, ದಾವುದ್ ಬಜಾಲ್ ಆಯ್ಕೆಯಾದರು.

ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಮಾಧ್ಯಮ ಸಲಹೆಗಾರರಾಗಿ ನಿಝಾಮುದ್ದೀನ್ ಉಪ್ಪಿನಂಗಡಿ, ಶಿಬಿರ ಉಸ್ತುವಾರಿಯಾಗಿ ರವೂಫ್ ಪಾಲ್ತಾಡ್, ಇಮ್ತಿಯಾಝ್ ಜೋಕಟ್ಟೆ, ಹನೀಫ್ ಮುಡಿಪು, ವೈದ್ಯಕೀಯ ಸಲಹೆಗಾರರಾಗಿ ಸಮೀರ್ ನಾರಾವಿ ಮತ್ತು ಕಾನೂನು ಸಲಹೆಗಾರರಾಗಿ ಹಕೀಂ ಕೆಸಿ ರೋಡ್ ಆಯ್ಕೆಗೊಂಡರು.

ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಅನಿವಾಸಿ ಸಮಿತಿಯ ಯುಎಇ ಘಟಕ ಅಧ್ಯಕ್ಷರಾಗಿ ನಝೀರ್ ಬಿಕರ್ಣಕಟ್ಟೆ,  ಬಹರೈನ್ ಘಟಕ ಅಧ್ಯಕ್ಷರಾಗಿ ಫಾರೂಕ್ ಬಹರೈನ್, ಒಮನ್ ಘಟಕ ಅಧ್ಯಕ್ಷರಾಗಿ ಅಫೀಝ್ ಒಮನ್ ಆಯ್ಕೆಯಾದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸ್ಥಾಪಕರಾದ ಸಿದ್ದೀಕ್ ಮಂಜೇಶ್ವರ ಮಾತನಾಡಿ ನಮ್ಮ ಸಂಸ್ಥೆಯು ಎಲ್ಲಾ ವರ್ಗದ ಜನರಿಗೆ ವೈದ್ಯಕೀಯ ನೆರವು, ರಕ್ತದಾನ ಮತ್ತು ಇತರೆ ಸೇವೆಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದು, ನಿಮ್ಮೆಲ್ಲರ ಸಹಕಾರದೊಂದಿಗೆ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.

2020- 21 ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ನವಾಝ್ ಕಲ್ಲರಕೊಡಿ ವಾಚಿಸಿದರು. ಕಾರ್ಯಕ್ರಮವನ್ನು ರಝಾಕ್ ಸಾಲ್ಮರ ಸ್ವಾಗತಿಸಿ, ಶಾಹುಲ್ ಹಮೀದ್ ಕಾಶಿಪಟ್ನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News