ನಾಪತ್ತೆಯಾಗಿದ್ದ ಬಾಲಕಿಯ ಶವ ಮನೆ ಸಮೀಪದ ಹೊಂಡದಲ್ಲಿ ಹೂತುಹಾಕಿರುವ ಸ್ಥಿತಿಯಲ್ಲಿ ಪತ್ತೆ

Update: 2021-03-02 17:29 GMT

ಬುಲಂದ್ ಶಹರ್: ಪಶ್ಚಿಮ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಹಳ್ಳಿಯಿಂದ 12 ವರ್ಷದ ಬಾಲಕಿ ನಾಪತ್ತೆಯಾದ 6 ದಿನಗಳ ನಂತರ ಮನೆ ಸಮೀಪವಿರುವ ಹೊಂಡವೊಂದರಲ್ಲಿ ಹೂತು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಫೆಬ್ರವರಿ 25ರಂದು ಸಂಜೆ ಬಾಲಕಿ ತನ್ನ ಕುಟುಂಬದ ಸದಸ್ಯರೊಂದಿಗೆ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಬಾಯಾರಿಕೆಯಾಗುತ್ತಿದೆ. ನೀರು ಕುಡಿಯಲು ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ಮತ್ತೆ ವಾಪಸಾಗಿಲ್ಲ ಎಂದು ಬುಲಂದ್ ಶಹರ್ ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಹೆತ್ತವರು ಫೆಬ್ರವರಿ 28 ರಂದು ನಾಪತ್ತೆಯ ದೂರನ್ನು ದಾಖಲಿಸಿದ್ದರು. ಬಾಲಕಿಯು ಹೊಲದಲ್ಲಿ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯೊಂದಿಗೆ ಕೆಲಸ ಮಾಡುತ್ತಿದ್ದಳು. ಬಾಲಕಿಯ ಶವ ಆಕೆಯ ಮನೆಯಿಂದ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ಬುಲಂದ್ ಶಹರ್ ಪೊಲೀಸ್ ಮುಖ್ಯಸ್ಥ ಸಂತೋಷ್ ಕುಮಾರ್ ಸಿಂಗ್ ಸುದ್ದಿಗಾರರೊಂದಿಗೆ ತಿಳಿಸಿದರು.

ಬಾಲಕಿಯನ್ನು ಹತ್ಯೆಗೈದಿರುವಂತೆ ಕಾಣುತ್ತಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲ. ಸಾಧ್ಯವಾದಷ್ಟು ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಬುಲಂದ್ ಶಹರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News