ಮಟಪಾಡಿ ವಾಲಿಬಾಲ್ ಪಂದ್ಯಾಕೂಟ: ಸ್ಟಾರ್ ಬುಲ್ಸ್ ತಂಡಕ್ಕೆ ಪ್ರಶಸ್ತಿ

Update: 2021-03-03 14:30 GMT

ಬ್ರಹ್ಮಾವರ, ಮಾ.3: ಮಟಪಾಡಿ ಬಲ್ಜ ಗ್ರೀನ್ ಪಾರ್ಕರ್ಸ್ ಯೂತ್ ಕ್ಲಬ್ ಆಶ್ರಯದಲ್ಲಿ ಇತ್ತೀಚೆಗೆ ಮಟಪಾಡಿಯಬಲ್ಜಯಲ್ಲಿ ನಡೆದ ಸ್ಥಳೀಯ ಆಹ್ವಾನಿತ 10 ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟದಲ್ಲಿ ಸ್ಟಾರ್ ಬುಲ್ಸ್ ತಂಡವು ‘ಗ್ರೀನ್ ಪಾರ್ಕರ್ಸ್ ಕಪ್-2021’ ಗೆದ್ದುಕೊಂಡಿದೆ.

ದ್ವಿತೀಯ ಬಹುಮಾನವನ್ನು ನ್ಯೂಸ್ಟಾರ್ ರಾಕರ್ಸ್ ಪಡೆಯಿತು. ಬೆಸ್ಟ್ ಸ್ಟ್ರೈಕರ್ ಆಗಿ ಗಣೇಶ್, ಬೆಸ್ಟ್ ಸೆಟ್ಟರ್ ಆಗಿ ರೋಹನ್, ಬೆಸ್ಟ್ ಡಿಫೆಂಡರ್ ಆಗಿ ಚೇತನ್ ಆಚಾರ್ಯ, ಆಲ್ರೌಂಡರ್ ಆಗಿ ದಿನೇಶ್ ನಾಯಕ್ ಬಹು ಮಾನ ಪಡೆದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸತೀಶ್ ಪೂಜಾರಿ, ಅಬ್ದುಲ್ ಸಲೀಮ್, ಮೆಸ್ಕಾಂ ಉದ್ಯೋಗಿ ಗಣೇಶ್ ದೇವಾಡಿಗ, ಮಟಪಾಡಿ ಶಾಲೆಯ ದೈಹಿಕ ಶಿಕ್ಷಕ ಪ್ರವೀಣ್ ಶೆಟ್ಟಿ, ಮಟಪಾಡಿ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯ ಸುಧಾಕರ ಶೆಟ್ಟಿ, ಪತ್ರಿಕಾ ವಿತರಕರಾದ ಗಣೇಶ್ ನಾಯಕ್ ಹಾಗೂ ಕ್ರೀಡಾಪಟು ರಕ್ಷಿತಾ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವಾರಾಜ್ ಶುಭಕೋರಿದರು. ಕಾರ್ಯಕ್ರಮ ದಲ್ಲಿ ಉಮ್ಮರಬ್ಬ ಶೇಖ್, ಅಶೋಕ್ ಪೂಜಾರಿ, ಸ್ಟಾಲಿನ್ ಸಿಕ್ವೇರಾ, ಕೆ.ಪಿ. ಇಬ್ರಾಹಿಂ ಪವಿತ್ರಾ ಗಣೇಶ್ ನಾಯಕ್, ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಸ್ಥಳೀಯರಾದ ಸುರೇಶ್ ನಾಯಕ್, ಅಣ್ಣಪ್ಪ ಗಾಣಿಗ, ಗಣೇಶ್ ನಾಯಕ್, ಮಹಾಬಲ ಪೂಜಾರಿ, ಅಲ್ತಾಫ್ ಅಹ್ಮದ್ ಮೊದಲಾದ ವರು ಉಪಸ್ಥಿತರಿದ್ದರು. ಪತ್ರಕರ್ತ ಚೇತನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News