ಕ್ರೀಡಾ ತಂಡಗಳು ನಾಡಿನ ಶ್ರೇಯಸ್ಸಿಗಾಗಿ ಶ್ರಮಿಸಬೇಕು : ಹಾಜಿ ಅಬ್ದುಲ್ ರಶೀದ್

Update: 2021-03-03 17:00 GMT

ಉಳ್ಳಾಲ : ಈ ಬಾರಿಯ ಯು.ಟಿ.ಫರೀದ್ ಸ್ಮಾರಕ ಕ್ರಿಕೆಟ್ ಪಂದ್ಯಾಟದಲ್ಲಿ ಅದ್ಭುತವಾಗಿ ಆಡಿ ಪ್ರಥಮ ಸ್ಥಾನವನ್ನು ಪಡೆದು ಕೊಂಡ ಮಿಲ್ಲತ್ ನಗರದ ಯುವಕರ 'ಮಿಲ್ಲತ್ ಗ್ಲಾಡಿಯೇಟರ್' ತಂಡದ ಗೆಲುವು ಶ್ಲಾಘನೀಯ. ಮಿಲ್ಲತ್ ನಗರದ ಯುವಕರು ಪರಿಸರದಲ್ಲಿ ನಡೆಸುತ್ತಿರುವ ಶ್ರಮದಾನ, ರಕ್ತದಾನ ಶಿಬಿರ ಮತ್ತು ಸರಕಾರಿ ಸವಲತ್ತುಗಳನ್ನು ಅರ್ಹರಿಗೆ ದೊರಕಿಸುವ ಜನ ಸೇವಾ ಕಾರ್ಯಗಳಿಂದಾಗಿ ಸಾಧ್ಯವಾಗಿದೆ, ಕ್ರೀಡಾ ಸಂಸ್ಥೆಗಳು ಊರಿನ ಶ್ರೇಯಸ್ಸಿಗಾಗಿ ದುಡಿಯುವುದಕ್ಕೂ ಆದ್ಯತೆ ನೀಡ ಬೇಕಿದೆ  ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಅವರು ಯುಪಿಎಲ್ ಕಪ್ ವಿಜೇತ ಮಿಲ್ಲತ್ ಗ್ಲಾಡಿಯೇಟರ್  ಆಟಗಾರರಿಗೆ, ಹಿತೈಷಿಗಳಿಗೆ ಮಿಲ್ಲತ್ ಫ್ರೆಂಡ್ಸ್ ಸರ್ಕಲ್ ಏರ್ಪಡಿಸಿದ ಕೃತಜ್ಞತಾ ಸಭೆ ಮತ್ತು ಔತಣ ಕೂಟದಲ್ಲಿ ಪಾಲ್ಗೊಂಡವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ, ಕಾಂಗ್ರೆಸ್ ನಾಯಕ ಫಾರೂಕ್ ಉಳ್ಳಾಲ್  ಕ್ರೀಡಾ ತಂಡಗಳಲ್ಲಿ ಮತ್ತು ಪಂದ್ಯಾಟಗಳಲ್ಲಿ ಎಲ್ಲಾ ಜಾತಿ-ಧರ್ಮಗಳ ಯುವಕರು ಆಟಗಾರರಾಗಿರುವುದು ಸಾಮರಸ್ಯ ನೆಲೆಗೊಳ್ಳಲು ಸಹಾಯಕವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತಂಡದ ಗೆಲುವಿಗೆ ಮುಖ್ಯ ಕಾರಣರಾದ ಆಟಗಾರರನ್ನು ಮತ್ತು ಹಿತೈಷಿಗಳಾದ ಸರ್ವ ಶ್ರೀನೀತೂ, ಶಿಹಾಬ್, ಸುಹೈಬ್, ಜನಾರ್ದನ, ಇಮ್ರಾನ್, ಇಬ್ರಾಹಿಂ ಸ್ಕ್ರಾಪ್ ಮರ್ಚೆಂಟ್, ನೌಷಾದ್ ಯುಟಿ. ಅಝ್ಮತ್, ಅರಾಫತ್, ರಿಲಾವತ್, ಸೌಖತ್, ಲುಕ್ಮಾನ್, ಬದ್ರು, ನೌಷಾದ್ ಎನ್.ಎಸ್, ಮಜೀದ್ ಬಹ್ರೈನ್, ರಿಝ್ವಾನ್, ಝಹೀರ್ , ಫೈಝಲ್, ನಿಶಾರ್, ಶರೀಫ್,ರನ್ನು ಅಭಿನಂದಿಸಲಾಯಿತು. ಆಟಗಾರರರಿಗೆ ಪ್ರೋತ್ಸಾಹಧನವನ್ನೂ ನೀಡಲಾಯಿತು.

ಸಭೆಯನ್ನುದ್ದೇಶಿಸಿ ರಹ್ಮಾನ್ ಹಳೇಕೋಟೆ, ಇಕ್ಬಾಲ್ ಕೆನರಾ, ಕೌನ್ಸಿಲರ್ ನಿಝಾಂ ರವರು ಸಮಯೋಚಿತವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಿಲ್ಲತ್ ನಗರ ಹಿದಾಯ ಮಸೀದಿಯ ಅಧ್ಯಕ್ಷ ,ಯುವ ಉದ್ಯಮಿ ಖಲೀಲ್, ಸಮಾಜ ಸೇವಕರುಗಳಾದ ಝುಬೈರ್ ಅಬ್ಬಾಸ್,  ಫೈರೋಝ್ ಹಳೇ ಕೋಟೆ,  ಮುತ್ತಲಿಬ್ , ಶಮೀಮ್, ಇಂತಿಯಾಝ್ ಮುಂತಾದವರು ಉಪಸ್ಥಿತರಿದ್ದರು.

ಸಫ್ವಾನ್ ಹಳೇಕೋಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News