ಉಡುಪಿ: 481 ಮಂದಿ ಹಿರಿಯರಿಂದ ಲಸಿಕೆ ಸ್ವೀಕಾರ

Update: 2021-03-04 14:35 GMT

ಉಡುಪಿ, ಮಾ.4: ಜಿಲ್ಲೆಯ 481 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಗುರುವಾರ ಕೋವಿಡ್-19ಕ್ಕೆ ಲಭ್ಯವಿರುವ ಕೋವಿ ಶೀಲ್ಡ್ ಲಸಿಕೆಯನ್ನು ಪಡೆದಿದ್ದಾರೆ. ಅದೇ ರೀತಿ 45ರಿಂದ 59ವರ್ಷದೊಳಗಿನ ಅನ್ಯ ರೋಗದಿಂದ ನರಳುವ 9 ಮಂದಿ ಸಹ ಇಂದು ಈ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಒಟ್ಟು 1200 ಮಂದಿ ಹಿರಿಯ ನಾಗರಿಕರು ಮತ್ತು 40 ಮಂದಿ ಅನ್ಯರೋಗವಿರುವ 45-59 ವಯೋಮಾನದವರು ಮೂರನೇ ಹಂತದಲ್ಲಿ ನೀಡಲಾಗುತ್ತಿರುವ ಲಸಿಕೆಯ ಮೊದಲ ಡೋಸ್‌ನ್ನು ಪಡೆದು ಕೊಂಡರು ಎಂದವರು ಹೇಳಿದರು.

ಉಳಿದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇಂದು 17 ಮಂದಿ ಮೊದಲ ಡೋಸ್‌ನ್ನು (ಒಟ್ಟು 17,741-ಶೇ.74) ಪಡೆದರೆ, 40 ಮಂದಿ ಎರಡನೇ ಡೋಸ್‌ನ್ನು (ಒಟ್ಟು 9150-ಶೇ.38) ಸ್ವೀಕರಿಸಿದ್ದಾರೆ.

ಎರಡನೇ ಹಂತದಲ್ಲಿ ಲಸಿಕೆಯನ್ನು ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಇಂದು 7 ಮಂದಿ ಮೊದಲ ಡೋಸ್ ಪಡೆದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 3172 (ಶೇ.74) ಆಗಿದೆ ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News