ತಲಪಾಡಿ ಟೋಲ್‌ನಲ್ಲಿ ಬಸ್‌ಗಳಿಗೆ ಪಾಸ್

Update: 2021-03-04 15:26 GMT

ಮಂಗಳೂರು, ಮಾ.4: ತಲಪಾಡಿ ಟೋಲ್ ಕೇಂದ್ರದಲ್ಲಿ ನಗರದ ಖಾಸಗಿ ಬಸ್‌ಗಳಿಗೆ ನಿಗದಿಪಡಿಸಿದ ದರದಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯರು ಹಾಗೂ ಸಿಟಿ ಬಸ್ ಮಾಲಕರ ಸಂಘದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸುಮಾರು 14,000ದಷ್ಟು ಅನಿಯಮಿತ ಪಾಸ್ ‌ಗಳನ್ನು ಕೊಡುವ ಬಗ್ಗೆ ತೀರ್ಮಾನಿಸಲಾಯಿತು.

ಇನ್ನು ಮುಂದೆ ಎಲ್ಲಾ ಸಿಟಿ ಬಸ್‌ಗಳು ತಲಪಾಡಿ ದಾಟಿ ಮುಂದಿನ ಬಸ್ ನಿಲ್ದಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News