ಕೋವಿಡ್-19 ಲಸಿಕೆ ಪಡೆದ ನಿರ್ಮಲಾ ಸೀತಾರಾಮನ್

Update: 2021-03-04 17:59 GMT
Photo: Twitter (@nsitharaman)

ಹೊಸದಿಲ್ಲಿ, ಮಾ.4: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಕೋವಿಡ್-19 ವಿರುದ್ಧದ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಗುರುವಾರ ಬೆಳಿಗ್ಗೆ ಕೋವಿಡ್-19 ವಿರುದ್ಧದ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದೇನೆ. ಈ ಸಂದರ್ಭ ಕಾಳಜಿ ಮತ್ತು ವೃತ್ತಿಪರತೆ ತೋರಿದ ವೈದ್ಯರಿಗೆ ಧನ್ಯವಾದಗಳು. ಅಭಿವೃದ್ಧಿ ಮತ್ತು ಸರಬರಾಜು(ಲಸಿಕೆ) ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ಮತ್ತು ಕೈಗೆಟಕುವ ರೀತಿಯಲ್ಲಿ ನಡೆಯುವ ಭಾರತದಲ್ಲಿ ಜನಿಸಿರುವುದು ನಮ್ಮ ಅದೃಷ್ಟ ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

60 ವರ್ಷ ಮೀರಿದ ಪ್ರತಿಯೊಬ್ಬರೂ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೀರಿದವರು ಮಾರ್ಚ್ 1ರಿಂದ ಕೋವಿಡ್-19 ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸಿ ನೀಡುವ ಲಸಿಕೆಯನ್ನು ಪಡೆಯಲು ಕೋ-ವಿನ್ 2.0 ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News