ಒಂದು ವೇಳೆ ಪೆಟ್ರೋಲ್,ಡೀಸೆಲ್ ಜಿಎಸ್ ಟಿ ವ್ಯಾಪ್ತಿಗೆ ಬಂದರೆ ಇವೆರಡರ ಬೆಲೆ ಎಷ್ಟಾಗಬಹುದು ಗೊತ್ತಾ?

Update: 2021-03-04 18:18 GMT

ಹೊಸದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಈ ಎರಡರ ಮೇಲಿನ ಅಬಕಾರಿ ಸುಂಕವನ್ನು ಇಳಿಸಬೇಕೆಂಬ ಬೇಡಿಕೆ ಎಲ್ಲೆಡೆ ಕೇಳಿಬರುತ್ತಿದೆ.  ಕಳೆದ ವರ್ಷದ ಕೊರೋನ ವೈರಸ್ ಲಾಕ್ ಡೌನ್ ಬಳಿಕ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಜನರು ಕ್ರಮೇಣ  ಕಚೇರಿ ಕಡೆ ಮರಳುತ್ತಿದ್ದಂತೆ ಇಂಧನದ ಬೇಡಿಕೆಯೂ ಹೆಚ್ಚಾಗುತ್ತಿದೆ.

ಅಂತರ್ ರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಏರಿಕೆಯ ನಂತರ ಕಳೆದ 9 ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.

ಎಸ್ ಬಿಐ ಅರ್ಥಶಾಸ್ತ್ರಜ್ಞರ ವರದಿಯ ಪ್ರಕಾರ, ಪೆಟ್ರೋಲ್ ಬೆಲೆಯು ಸರಕು ಹಾಗೂ ಸೇವಾ ತೆರಿಗೆ(ಜಿಎಸ್ ಟಿ)ವ್ಯಾಪ್ತಿಗೆ ಒಳಪಟ್ಟರೆ ದೇಶಾದ್ಯಂತ ಲೀಟರ್ ಗೆ 75 ರೂ. ಹಾಗೂ ಡೀಸೆಲ್ ಲೀಟರ್ ಗೆ 68 ರೂ. ಇಳಿಯಬಹುದು. ಎಸ್ ಬಿ ಐ ಅರ್ಥಶಾಸ್ತ್ರಜ್ಞರ ಪ್ರಕಾರ, ಜಿಎಸ್ ಟಿಯ ವ್ಯಾಪ್ತಿಗೆ ತಂದರೆ ಇಂಧನ ಬೆಲೆ ಕಡಿಮೆಯಾಗುತ್ತದೆ.

ಪ್ರಸ್ತುತ ದಿಲ್ಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 91.17 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 81.94 ರೂ. ಇದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ಪೆಟ್ರೋಲ್ ದರ 100 ರೂ. ದಾಟಿದ್ದು, ಈ ಎರಡು ರಾಜ್ಯಗಳಲ್ಲಿ ಇಂಧನದ ಮೇಲೆ ವ್ಯಾಟ್ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News