ಮಾ.6ರಿಂದ ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ಆನ್ಲೈನ್ ಇನ್ಸೆಪ್ಶನ್ ಕಾರ್ಯಾಗಾರ

Update: 2021-03-05 05:36 GMT

ಮಂಗಳೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ  ಮಾ. 13 ಹಾಗೂ 14 ರಂದು ತಾಜುಸ್ಸುನ್ನ ಭಟ್ಕಳದಲ್ಲಿ ನಡೆಯುವ ಅಸಂಬ್ಲೇಜ್ ಕಾರ್ಯಾಗಾರದ ಸಿದ್ದತೆಗಾಗಿ ಅಸಂಬ್ಲೇಜ್ ಪೂರ್ವಭಾವಿ ಇನ್ಸೆಪ್ಶನ್ ಕಾರ್ಯಗಾರಗಳು  ಮಾ.6ರಿಂದ10ರವರೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಆದ್ಯಕ್ಷತೆಯಲ್ಲಿ ಆನ್ಲೈನ್ ನಲ್ಲಿ ನಡೆಯಲಿದೆ.

ಮಾ.6 ರಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ  ಅಬ್ದುಲ್ಲತೀಫ್ ಸಅದಿ  ಶಿವಮೊಗ್ಗ , ಮಾ. 7 ರಂದು ಸುನ್ನಿ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ,ಮಾ.8 ರಂದು ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಮಾ. 9 ರಂದು ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಮಾ. 10 ರಂದು ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪಾಕ್ಷಿಕ ಪ್ರಧಾನ ಸಂಪಾದಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ತರಗತಿಗಳನ್ನು ಮಂಡಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News