ಹೊಸತನದೊಂದಿಗೆ ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರ ಸೇವೆ : ಜಿ.ಆರ್. ರವಿ

Update: 2021-03-05 09:41 GMT

ಮಂಗಳೂರು, ಮಾ.5: ಬಿಎಸ್‌ಎನ್‌ಎಲ್ ಟೆಲಿಕಾಂನ ದಕ್ಷಿಣ ಕನ್ನಡ ವಿಭಾಗವು ಹೊಸತನದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದ್ದು, ಹೊಸ ಆಫರ್‌ಗಳನ್ನು ನೀಡುತ್ತಿದೆ ಎಂದು ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕ ಜಿ.ಆರ್. ರವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಂಗಳೂರು ನಗರದಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆಯು ಹೈಸ್ಪೀಡ್ 4ಜಿ ಡಾಟಾದೊಂದಿಗೆ ಗ್ರಾಕರಿಗೆ ಲಭ್ಯವಿದ್ದು, ಇದರ ಜತೆಗೆ ಹಲವಾರು ಆಫರ್‌ಗಳನ್ನು ಇದೀಗ ಅತಿಮೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸಲಿದೆ.

ಎಫ್‌ಆರ್‌ಸಿ-47 ಪ್ಲಾನ್ 28 ದಿನಗಳ ಅನ್‌ಲಿಮಿಟೆಡ್ ವಾಯ್ಸ್, 14 ಜಿಬಿ ಡಾಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಹೊಂದಿರುತ್ತದೆ. ಹೊಸ ಪ್ಲಾನ್ 249 ರೂ.ಗಳಲ್ಲಿ ಗ್ರಾಹಕರು 60 ದಿನಗಳ ಅವಧಿಗೆ ಅನ್‌ಲಿಮಿಟೆಡ್ ವಾಯ್ಸ್, 1+1 ಜಿಬಿ ಡಾಟಾ, ಪ್ರತಿನಿತ್ಯ 100 ಎಸ್‌ಎಂಎಸ್‌ಗಳ ಅವಕಾಶವನ್ನು ಪಡೆಯಬಹುದಾಗಿದೆ. ಈ ಯೋಜನೆ ಮಾರ್ಚ್ 31ರವರೆಗೆ ಗ್ರಾಹಕರಿಗೆ ಲಭ್ಯವಿದೆ. ಇದಲ್ಲದೆ ಒಂದು ವರ್ಷ ಅವಧಿಯ ಪಿವಿ ಯೋಜನೆ 365 ರೂ./ 1499 ರೂ./1999 ರೂ./ 2399 ರೂ.ಗಳಲ್ಲಿ ಲಭ್ಯವಿದ್ದು, ಪ್ರತಿಯೊಂದು ಪ್ಲಾನ್ ಕೂಡಾ ಪ್ರಯೋಜನಕಾರಿ ವಿವಿಧ ರೀತಿಯ ಡಾಟಾ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ ಇತರ ಹಲವಾರು ಯೋಜನೆಗಳನ್ನು ಬಿಎಸ್‌ಎನ್‌ಎಲ್ ಹೊಂದಿದ್ದು, ಗ್ರಾಹಕರಿಗೆ ನಗುಮೊಗದ ಸೇವೆಯೊಂದಿಗೆ ನೆಟ್‌ವರ್ಕ್‌ಗೆ ಸಂಬಂಧಿಸಿ ಹಿಂದೆ ಗ್ರಾಹಕರು ಎದುರಿಸುತ್ತಿದ್ದ ಸಮಸ್ಯೆಗಳಿಂದ ಮುಕ್ತರಾಗಿ ಈಗ ಹೊಸತನದ ಸೇವೆಯನ್ನು ಅನುಭವಿಸಬಹುದಾಗಿದೆ. ಬಿಎಸ್‌ಎನ್‌ಎಲ್‌ನ ಪ್ರೀಪೇಯ್ಡೆ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ ಯಾವುದೇ ನೆಟ್‌ ವರ್ಕ್ ಕಾಲ್ ಫಾರ್ವಾಡ್ ಮಾಡಬಹುದಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ನೆಟ್‌ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಭಾರತ್ ಏರ್‌ಫೈಬರ್ ವ್ಯವಸ್ಥೆಯನ್ನು ಅಳವಡಿಸಿದೆ. ಈಗಾಗಲೇ ಸುಳ್ಯದ ದೊಡ್ಡಬೆಟ ಹಾಗೂ ಕಮಿಲದಲ್ಲಿ ಹೈಸ್ಪೀಡ್ ಇಂಟರ್‌ನೆಟ್ ವ್ಯವಸ್ಥೆಯನ್ನು ಅಳವಡಿಸಿದ್ದು, ಈಗಾಗಲೇ ಕ್ರಮವಾಗಿ ಇಲ್ಲಿ 23 ಹಾಗೂ 8 ಗ್ರಾಹಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದೀಚೆಗೆ ಈ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ಬಂಟ್ವಾಳ, ವಿಟ್ಲದಲ್ಲಿಯೂ ಈ ವ್ಯವಸ್ಥೆ ಅವಡಿಸಲು ಕ್ರಮ ಕೈಗೊಳ್ಳಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಸಮಸ್ಯೆಗೆ ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಯೂ ಬಹುದೊಡ್ಡ ಸುಸ್ಯೆಯಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News