ಪೇರಡ್ಕ ಉರೂಸ್ ಸಮಾರಂಭಕ್ಕೆ ಚಾಲನೆ

Update: 2021-03-05 09:56 GMT

ಸುಳ್ಯ: ಪೇರಡ್ಕದಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್ ಆಲಿ ಹಾಜಿ ದ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಪೇರಡ್ಕ ಖತೀಬ್ ಉಸ್ತಾದ್ ಸುಹೈಲ್ ದಾರಿಮಿ ದುಆ ನೇತೃತ್ವ ವಹಿಸಿದ್ದರು. ಬಳಿಕ ದರ್ಗಾ ಅಲಂಕಾರ ಮತ್ತು ದ್ವಜರೋಹಣ ಕಾರ್ಯಕ್ರಮವನ್ನು ಪೇರಡ್ಕ ಜಮಾಅತ್ ಗೌರವಾಧ್ಯಕ್ಷರಾದ ಟಿ.ಎಂ. ಶಾಹಿದ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಝಾಕ್ ಹಾಜಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಇಬ್ರಾಹಿಂ ಕರಾವಳಿ, ಮಹಮ್ಮದ್ ಕುಂಞಿ ತೆಕ್ಕಿಲ್,  ಸದರ್ ಉಸ್ತಾದ್ ಜಕರಿಯ, ಇಬ್ರಾಹಿಂ ಸೆಟ್ಯಡ್ಕ, ರಿಯಾಝ್ ಕಲ್ಲುಗುಂಡಿ, ಎನ್ ಎಚ್ ಹಾರಿಸ್, ಮುನೀರ್ ದಾರಿಮಿ, ಪಾಂಡಿ ಅಬ್ಬಾಸ್, ಐಜಿ ಇಸ್ಮಾಯಿಲ್, ಅಶ್ರಫ್ ತರ್ಲಿ, ಬಶೀರ್ ತೆಕ್ಕಿಲ್, ಫಿ.ಕೆ ಉಮ್ಮರ್, ಖಾದರ್ ಮೊಟ್ಟೆಂಗಾರ್, ಅಶ್ರಫ್ ಟರ್ಲಿ, ಎಂಆರ್ ಡಿಎ ಅಧ್ಯಕ್ಷ ಝಕೀರ್ ಹುಸೈನ್ ಶಾಫಿ ಕಲ್ಲುಗುಂಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News