ಸ್ಥಳೀಯ ಸಂಸ್ಥೆಗಳಲ್ಲಿ ಎಸ್‍ಸಿ ಎಸ್‍ಟಿ, ಒಬಿಸಿ ಮೀಸಲು ಶೇ.50ಕ್ಕಿಂತ ಹೆಚ್ಚಿರಬಾರದು: ಸುಪ್ರೀಂಕೋರ್ಟ್

Update: 2021-03-05 11:04 GMT

ಹೊಸದಿಲ್ಲಿ: ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳು(ಒಬಿಸಿ), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಸ್ಥಾನಗಳ ಸಂಖ್ಯೆ ಒಟ್ಟು ಸ್ಥಾನಗಳ ಶೇ.50ನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ ಎಂದು 'Bar and Bench' ವರದಿ ಮಾಡಿದೆ.

ಮಹಾರಾಷ್ಟ್ರ ಜಿಲ್ಲಾ ಪರಿಷತ್ ಗಳು ಹಾಗೂ ಪಂಚಾಯತ್ ಸಮಿತಿಗಳ ಕಾಯ್ದೆ 1961ರ ಒಂದು ಕಲಂ ಅನ್ನು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆ. ಈ ಕಲಂ ಸರಕಾರವು ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇ.27 ಮೀಸಲಾತಿಯನ್ನು ಸರಕಾರ ಕಡ್ಡಾಯಗೊಳಿಸಿದೆ.

ಒಬಿಸಿ ಮೀಸಲಾತಿ ಕೇವಲ ರಾಜ್ಯ ಶಾಸನಗಳು ಒದಗಿಸಬೇಕಾದ ಶಾಸನಬದ್ಧ ವಿತರಣೆ ಹಾಗೂ ಎಸ್ ಸಿ/ಎಸ್ ಟಿಗಳಿಗೆ ಸಂಬಂಧಿಸಿದ ಸಾಂವಿಧಾನಿಕ ಮೀಸಲಾತಿಗೆ ಹೋಲಿಸುವಂತಿಲ್ಲ ಎಂದು ನ್ಯಾಯಾಲಯ ಗಮನಿಸಿತು.

ಎಸ್ ಸಿ/ಎಸ್‍ಟಿ/ಒಬಿಸಿಗಳ ಪರವಾಗಿ ಕಾಯ್ದಿರಿಸಲಾಗಿರುವ ಒಟ್ಟು ಸೀಟುಗಳಲ್ಲಿ ಶೇ.50ಕ್ಕೆ ಮೀರದಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡಲು ಅಧಿಸೂಚಿಸಬಹುದು ಎಂದು ಈ ಕಲಂ ಅನ್ನು ವ್ಯಾಖ್ಯಾನಿಸಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಇಂದು ಮಲ್ಹೋತ್ರಾ ಹಾಗೂ ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಒಬಿಸಿಗಳಿಗೆ ಶೇ.27ರವರೆಗೆ ಮೀಸಲಾತಿ ನೀಡಬಹುದು. ಆದರೆ ಎಸ್ ಸಿ/ಎಸ್ ಟಿ ಹಾಗೂ ಒಬಿಸಿಗಳಿಗೆ ಒಟ್ಟು ಮೀಸಲಾತಿ ಶೇ.50 ಮಿತಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ವಿವರಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News