ಸಂಸದರು ಬಯಸಿದರೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧ: ಪಾಕ್ ಪ್ರಧಾನಿ ಇಮ್ರಾನ್

Update: 2021-03-05 14:32 GMT
 ಫೋಟೊ ಕೃಪೆ :/twitter.com/ImranKhanPTI

ಇಸ್ಲಾಮಾಬಾದ್ (ಪಾಕಿಸ್ತಾನ), ಮಾ. 5: ನಾನು ‘ಅಸಮರ್ಥ’ ಎಂಬುದಾಗಿ ನನ್ನ ಪಕ್ಷದ ಸಂಸದರು ಭಾವಿಸಿದರೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ.

ಸೆನೆಟ್ ಚುನಾವಣೆಯಲ್ಲಿ ಅವರ ಪಕ್ಷದ ಅಭ್ಯರ್ಥಿಯೊಬ್ಬರು ಸೋಲನುಭವಿಸಿದ ಬಳಿಕ ಅವರು ದೇಶವನ್ನುದ್ದೇ3ಶಿಸಿ ಮಾತನಾಡುತ್ತಿದ್ದರು.

‘‘ನನ್ನ ಪ್ರಧಾನಿ ಹುದ್ದೆ ಹೋದರೂ ಪರವಾಗಿಲ್ಲ. ಪ್ರತಿಪಕ್ಷದವರು ದೇಶದ ಹಣವನ್ನು ಹಿಂದಿರುಗಿಸುವವರೆಗೂ ಯಾರನ್ನೂ ಬಿಡುವುದಿಲ್ಲ’’ ಎಂಬ ಎಚ್ಚರಿಕೆಯನ್ನೂ ಅವರು ಇದೇ ಸಂದರ್ಭದಲ್ಲಿ ನೀಡಿದರು.

‘‘ಪಾಕಿಸ್ತಾನ್ ತೆಹ್ರೀಕಿ ಇನ್ಸಾಫ್ ಪಕ್ಷದ ಎಲ್ಲ ಸದಸ್ಯರೇ, ಇದು ನಿಮ್ಮ ಪ್ರಜಾಸತ್ತಾತ್ಮಕ ಹಕ್ಕು. ನಾನು ಅಸಮರ್ಥ ಎಂಬುದಾಗಿ ನೀವು ಭಾವಿಸಿದರೆ ನಾನು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧ’’ ಎಂದು ಅವರು ಹೇಳಿದರು.

ದೇಶದ ಸೆನೆಟ್ ಚುನಾವಣೆಯಲ್ಲಿ ಪ್ರಮುಖ ಸ್ಥಾನವೊಂದನ್ನು ಇಮ್ರಾನ್ ಖಾನ್ ಪಕ್ಷ ಕಳೆದುಕೊಂಡಿದೆ. ಪ್ರತಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಸೈಯದ್ ಯೂಸುಫ್ ರಝ ಗಿಲಾನಿ ದೇಶದ ಹಾಲಿ ಹಣಕಾಸು ಸಚಿವ ಶೇಖ್‌ರನ್ನು 169-164 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಅನಧಿಕೃತ ಫಲಿತಾಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News