ನಟ ಸುಶಾಂತ್ ಸಿಂಗ್ ಸಾವು ಪ್ರಕರಣ: ಎನ್‌ಸಿಬಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ರಿಯಾ ಸಹಿತ 33 ಮಂದಿ ಹೆಸರು

Update: 2021-03-05 16:29 GMT

ಹೊಸದಿಲ್ಲಿ, ಮಾ. 3: ಕಳೆದ ವರ್ಷ ಸಂಭವಿಸಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಮುಂಬೈಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಶುಕ್ರವಾರ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ನಟಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಸೇರಿದಂತೆ 33 ಮಂದಿಯ ಹೆಸರನ್ನು ಉಲ್ಲೇಖಿಸಿದೆ.

ಸುಮಾರು 12 ಸಾವಿರ ಪುಟಗಳಿರುವ ಆರೋಪ ಪಟ್ಟಿಯಲ್ಲಿ 200ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಸಂಭವಿಸಿದ 34ರ ಹರೆಯದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಎನ್‌ಸಿಬಿ ತನಿಖೆ ಆರಂಭಿಸಿತ್ತು. ಮಾದಕ ದ್ರವ್ಯ ಹಾಗೂ ಸೈಕೋಟ್ರೋಪಿಕ್‌ನ ವಿವಿದ ಕಲಂಗಳ ಅಡಿಯಲ್ಲಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್‌ರನ್ನು ಅದು ಬಂಧಿಸಿತ್ತು. ಅನಂತರ ಅವರು ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

ಈ ಪ್ರಕರಣದ 33 ಆರೋಪಿಗಳಲ್ಲಿ 8 ಮಂದಿ ಇನ್ನು ಕೂಡ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ತನಿಖೆ ವೇಳೆ ಹಲವು ವಸ್ತುಗಳು, ಇಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಭಾರತ, ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಳ್ಳಲಾದ ವಸ್ತುಗಳು ಮಾದಕದ್ರವ್ಯದ ಲಕ್ಷಣವನ್ನು ಹೊಂದಿದೆ ಎಂಬುದನ್ನು ಪರೀಕ್ಷೆಗಳು ದೃಢಪಡಿಸಿವೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News