ಕೊರೋನ ಸೋಂಕು: ಭಾರತದಲ್ಲಿ 16,838 ಹೊಸ ಪ್ರಕರಣ ದಾಖಲು

Update: 2021-03-05 16:38 GMT

ಹೊಸದಿಲ್ಲಿ, ಮಾ.5: ಶುಕ್ರವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಕೊರೋನ ಸೋಂಕಿನ ಹೊಸ 16,838 ಪ್ರಕರಣ ದಾಖಲಾಗಿದ್ದು 113 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಒಟ್ಟು ಪ್ರಕರಣ 1,11,73,761ಕ್ಕೇರಿದ್ದರೆ ಮೃತರ ಒಟ್ಟು ಸಂಖ್ಯೆ 1.57 ಲಕ್ಷ ದಾಟಿದೆ . ನವೆಂಬರ್ 15ರ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‌ನಲ್ಲಿ 1000ಕ್ಕೂ ಅಧಿಕ ಪ್ರಕರಣ ವರದಿಯಾಗಿದ್ದು ಗುರುವಾರ 1,071 ಸೋಂಕು ಪ್ರಕರಣ ವರದಿಯಾಗಿದೆ. ದೇಶದಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ 1,76,319 ಆಗಿದ್ದು ಇದರಲ್ಲಿ 86,000ಕ್ಕೂ ಅಧಿಕ ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಚೇತರಿಸಿಕೊಂಡವರ ಪ್ರಮಾಣ 1,08,39,894ಕ್ಕೇರಿದ್ದು ಇದರೊಂದಿಗೆ ಚೇತರಿಕೆಯ ಪ್ರಮಾಣ 97.01%ಕ್ಕೆ ತಲುಪಿದ್ದು ಮರಣದ ಪ್ರಮಾಣ 1.41% ಆಗಿದೆ. ಕಳೆದ 24 ಗಂಟೆಗಳಲ್ಲಿ ಸಂಭವಿಸಿದ 113 ಸಾವಿನ ಪ್ರಕರಣಗಳಲ್ಲಿ 89% ಪ್ರಕರಣ ಆರು ರಾಜ್ಯಗಳಲ್ಲಿ ಸಂಭವಿಸಿದೆ. 18 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News