ಎಸ್‌ಎಫ್‌ಡಿಆರ್ ಕ್ಷಿಪಣಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

Update: 2021-03-05 17:32 GMT

ಹೊಸದಿಲ್ಲಿ, ಮಾ.5: ಎಸ್‌ಎಫ್‌ಡಿಆರ್(ಸಾಲಿಡ್ ಫ್ಯುಯೆಲ್ ಬೇಸ್ಡ್ ರ್ಯಾಮ್ಜೆಟ್) ತಂತ್ರಜ್ಞಾನ ಹೊಂದಿರುವ ಕ್ಷಿಪಣಿ ಚೋದಕ ವ್ಯವಸ್ಥೆಯ ಪರೀಕ್ಷಾ ಪ್ರಯೋಗ ಒಡಿಶಾದ ಕಡಲ ತೀರದ ಬಳಿಯಿರುವ ಚಾಂಡಿಪುರ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಯಶಸ್ವಿಯಾಗಿದೆ ಎಂದು ಡಿಆರ್‌ಡಿಒ ಹೇಳಿದೆ.

ದೀರ್ಘ ವ್ಯಾಪ್ತಿಯ ಆಗಸದಿಂದ ಉಡಾಯಿಸುವ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸುವತ್ತ ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಡಿಆರ್‌ಡಿಒ ಹೇಳಿದೆ. ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಆಗಸದಿಂದ ಉಡಾಯಿಸುವ 100 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ‘ಅಸ್ತ್ರ’ದ ಯಶಸ್ಸಿನ ಬಳಿಕ ಮುಂದಿನ ಕೆಲ ತಿಂಗಳಿನಲ್ಲಿ ದೀರ್ಘ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಗೆ ಡಿಆರ್‌ಡಿಒ ಯೋಜನೆ ರೂಪಿಸಿದೆ.

ಶುಕ್ರವಾರ ಯಶಸ್ವಿಯಾಗಿ ಪ್ರಯೋಗಿಸಿದ ಎಸ್‌ಎಫ್‌ಡಿಆರ್ ಆಧುನಿಕ ತಂತ್ರಜ್ಞಾನವನ್ನು ವಿಶ್ವದ ಕೆಲವೇ ರಾಷ್ಟ್ರಗಳು ಹೊಂದಿವೆ ಎಂದು ಡಿಆರ್‌ಡಿಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News