ನ್ಯೂಯಾರ್ಕ್ ಫೆಡರಲ್ ರಿಸರ್ವ್ ಬ್ಯಾಂಕ್ ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ನೌರೀನ್ ಹಸನ್

Update: 2021-03-06 17:10 GMT
ನೌರೀನ್ ಹಸನ್ (Photo: Twitter/@NewYorkFed)

ನ್ಯೂಯಾರ್ಕ್,ಮಾ.6: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಪ್ರಥಮ ಉಪಾಧ್ಯಕ್ಷೆ ಹಾಗೂ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಭಾರತೀಯ ಮೂಲದ ವಿತ್ತ ವ್ಯವಹಾರಗಳ ತಜ್ಞೆ ನೌರೀನ್ ಹಸ್ಸನ್ ಗುರುವಾರ ನೇಮಕಗೊಂಡಿದ್ದಾರೆ.

   ನೌರೀನ್ ಅವರ ನೇಮಕಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ವ್ಯವಸ್ಥೆಯ ಗವರ್ನರ್‌ಗಳ ಮಂಡಳಿಯು ಅನುಮೋದನೆ ನೀಡಿರುವುದಾಗಿ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಪ್ರಪ್ರಥಮ ಉಪಾಧ್ಯಕ್ಷರಾಗಿ ನೌರೀನ್ ಹಸನ್ ಅವರು ಸೆಕೆಂಡ್ ರ್ಯಾಂಕಿಂಗ್ ಅಧಿಕಾರಿಯ ಸ್ಥಾನಮಾನವನ್ನು ಹೊಂದಿದ್ದು, ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ ಪರ್ಯಾಯ ಮತಚಲಾವಣಾ ಸದಸ್ಯೆಯೂ ಆಗಲಿದ್ದಾರೆ.

   ನೌರೀನ್ ಅವರ ಪಾಲಕರು ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದವರಾಗಿದ್ದರು. ನೌರೀನ್ ಅವರಿಗೆ ವಿತ್ತೀಯಸೇವೆಗಳ ಉದ್ಯಮಗಳಲ್ಲಿ 25 ವರ್ಷಗಳಿಗೂ ಅಧಿಕ ಅನುಭವಿದೆ. ವಿತ್ತೀಯ ಕಾರ್ಯತಂತ್ರ, ಡಿಜಿಟಲ್ ಪರಿವರ್ತನೆ, ಸೈಬರ್ ಭದ್ರತೆ ಮತ್ತಿತರ ಕ್ಷೇತ್ರಗಳಲ್ಲಿ ಪರಿಣಿತೆಯಾಗಿದ್ದಾರೆ.

 ತೀರಾ ಇತ್ತೀಚೆಗೆ ನೌರೀನ್ ಅವರು ಮೊರ್ಗಾನ್ ಸ್ಟಾನ್ಲಿ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಮುಖ್ಯ ಡಿಜಿಟಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News