ಅನಾರೋಗ್ಯ ನಿಮಿತ್ತ ಜಾಮೀನು ಪಡೆದಿದ್ದ ಹೋರಾಟಗಾರ ವರವರ ರಾವ್ ಆಸ್ಪತ್ರೆಯಿಂದ ಬಿಡುಗಡೆ

Update: 2021-03-07 17:37 GMT

ಮುಂಬೈ,ಮಾ.7: ಭೀಮಾ-ಕೋರೆಗಾಂವ ಪ್ರಕರಣದಲ್ಲಿ ಆರೋಪಿಯಾಗಿರುವ ಹೋರಾಟಗಾರ ಹಾಗೂ ಕವಿ ವರವರ ರಾವ್ ಅವರು ಶನಿವಾರ ರಾತ್ರಿ ಇಲ್ಲಿಯ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು,ನ್ಯಾಯಾಲಯದ ಆದೇಶದ ಮೇರೆಗೆ ರವಿವಾರ ಜಾಮೀನಿನಲ್ಲಿ ಬಂಧಮುಕ್ತರಾಗಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿದ್ದ ರಾವ್(82) ಇತ್ತೀಚಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.

ಬಾಂಬೆ ಉಚ್ಚ ನ್ಯಾಯಾಲಯವು ಫೆ.22ರಂದು ಅನಾರೋಗ್ಯದ ಕಾರಣದಿಂದ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತ್ತು.

ರಾವ್ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ತಕ್ಷಣ ಅವರನ್ನು ಜಾಮೀನಿನಲ್ಲಿ ಬಂಧಮುಕ್ತಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂದೆ ಮತ್ತು ಮನೀಷ್ ಪಿತಳೆ ಅವರ ಪೀಠವು ಆದೇಶಿಸಿತ್ತು.

50,000 ರೂ.ಗಳ ಬಾಂಡ್ ಮತ್ತು ಇಬ್ಬರು ಜಾಮೀನುದಾರರನ್ನು ಒದಗಿಸುವಂತೆ ನ್ಯಾಯಾಲಯವು ರಾವ್ ಗೆ ಸೂಚಿಸಿತ್ತು. ಸೂಕ್ತ ಜಾಮೀನುದಾರರು ದೊರೆಯುವವರೆಗೆ ನಗದು ಜಾಮೀನು ಒದಗಿಸಲು ಅವಕಾಶ ನೀಡಬೇಕು ಎಂದು ರಾವ್ ಬಳಿಕ ನ್ಯಾಯಾಲಯವನ್ನು ಕೋರಿಕೊಂಡಿದ್ದರು. ಸ…
[20:16, 3/7/2021] Muaad VB: ಮುಂಬೈ,ಮಾ.7: ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಹೋರಾಟಗಾರ ಹಾಗೂ ಕವಿ ವರವರ ರಾವ್ ಅವರು ಶನಿವಾರ ರಾತ್ರಿ ಇಲ್ಲಿಯ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು,ನ್ಯಾಯಾಲಯದ ಆದೇಶದ ಮೇರೆಗೆ ರವಿವಾರ ಜಾಮೀನಿನಲ್ಲಿ ಬಂಧಮುಕ್ತರಾಗಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿದ್ದ ರಾವ್(82) ಇತ್ತೀಚಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.

ಬಾಂಬೆ ಉಚ್ಚ ನ್ಯಾಯಾಲಯವು ಫೆ.22ರಂದು ಅನಾರೋಗ್ಯದ ಕಾರಣದಿಂದ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತ್ತು.

ರಾವ್ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ತಕ್ಷಣ ಅವರನ್ನು ಜಾಮೀನಿನಲ್ಲಿ ಬಂಧಮುಕ್ತಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂದೆ ಮತ್ತು ಮನೀಷ್ ಪಿತಳೆ ಅವರ ಪೀಠವು ಆದೇಶಿಸಿತ್ತು.

50,000 ರೂ.ಗಳ ಬಾಂಡ್ ಮತ್ತು ಇಬ್ಬರು ಜಾಮೀನುದಾರರನ್ನು ಒದಗಿಸುವಂತೆ ನ್ಯಾಯಾಲಯವು ರಾವ್ ಗೆ ಸೂಚಿಸಿತ್ತು. ಸೂಕ್ತ ಜಾಮೀನುದಾರರು ದೊರೆಯುವವರೆಗೆ ನಗದು ಜಾಮೀನು ಒದಗಿಸಲು ಅವಕಾಶ ನೀಡಬೇಕು ಎಂದು ರಾವ್ ಬಳಿಕ ನ್ಯಾಯಾಲಯವನ್ನು ಕೋರಿಕೊಂಡಿದ್ದರು. ಸೋಮವಾರ ನ್ಯಾಯಾಲಯವು ಅವರ ಕೋರಿಕೆಯನ್ನು ಪುರಸ್ಕರಿಸಿತ್ತು.

2017,ಡಿ.31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾ‌ರ್ ಪರಿಷತ್ನಲ್ಲಿ ಆರೋಪಿಗಳು ಪ್ರಚೋದಕ ಭಾಷಣಗಳನ್ನು ಮಾಡಿದ್ದರು ಮತ್ತು ಇದು ಮರುದಿನ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿಕ ನಡೆದಿದ್ದ ಹಿಂಸಾಚಾರಗಳಿಗೆ ಕಾರಣವಾಗಿತ್ತು. ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದವರು ಎಲ್ಗಾರ್ ಪರಿಷತ್ ಅನ್ನು ಆಯೋಜಿಸಿದ್ದರು ಎನ್ನುವುದು ಪೊಲೀಸರ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News