ಮಣಿಪಾಲ: ಜಮಾಲುದ್ದೀನ್ ಹಿಂದಿಗೆ ಪಿಎಚ್‌ಡಿ ಪದವಿ

Update: 2021-03-07 14:10 GMT

ಮಣಿಪಾಲ, ಮಾ.7: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಿರಿಯ ಸಹ ಪ್ರಾಧ್ಯಾಪಕರಾಗಿರುವ ಜಮಾಲುದ್ದೀನ್ ಹಿಂದಿ ಅವರಿಗೆ ‘ಹಾರ್ಡ್‌ನೆಸ್ ರಿಲೇಟೆಡ್ ಕ್ಯಾರಕ್ಟರಿಸ್ಟಿಕ್ಸ್ ಆಫ್ ಪ್ರೆಸಿಪಿಟೇಶನ್ ಹಾರ್ಡೆನೆಡ್ ಎ1-7075- ಕಾಸ್ಟ್-ಐರನ್ ಮೆಟಲ್ ಮ್ಯಾಟ್ರಿಕ್ಸ್ ಕಾಂಪೋಸಿಟ್ಸ್’ ಎಂಬ ವಿಷಯದಲ್ಲಿ ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.

ಇವರು ತಮ್ಮ ಸಂಶೋಧನೆಯನ್ನು ಡಾ. ಅಚ್ಯುತ ಕಿಣಿ ಮತ್ತು ಡಾ. ಸತ್ಯ ಶಂಕರ್ ಶರ್ಮಾರವರ ಮಾರ್ಗದರ್ಶನದಲ್ಲಿ ನಡೆಸಿದ್ದಾರೆ.

ಜಮಾಲುದ್ದೀನ್ ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕ ಸಂಪಾದಕ ದಿ.ಇಬ್ರಾಹಿಂ ಸಈದ್ ಮತ್ತು ಆಯಿಶಾ ದಂಪತಿಯ ಕಿರಿಯ ಪುತ್ರ. ಇವರು ಪ್ರಸ್ತುತ ಮಣಿಪಾಲದಲ್ಲಿ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News