ಎಪಿಜೆ ಅಬ್ದುಲ್‌ ಕಲಾಮ್‌ ರ ಹಿರಿಯ ಸಹೋದರ ಮುಹಮ್ಮದ್‌ ಮುತ್ತು ನಿಧನ

Update: 2021-03-07 15:54 GMT

ರಾಮೇಶ್ವರಂ: ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದ ಡಾ. ಎಪಿಜೆ ಅಬ್ದುಲ್‌ ಕಲಾಂರವರ ಹಿರಿಯ ಸಹೋದರ ಇಂದು ನಿಧನರಾಗಿದ್ದಾರೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ. 

ಅಬ್ದುಲ್‌ ಕಲಾಂ ಸಹೋದರ ಮುಹಮ್ಮದ್‌ ಮುತ್ತು ಮೀರಾ ಲಬ್ಬೈ ಮರೈಕ್ಕಾರ್‌ ರಾಮೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆಂದು ವರದಿ ತಿಳಿಸಿದೆ. ಅವರಿಗೆ ೧೦೪ ವಯಸ್ಸಾಗಿತ್ತು. ರಾಮೇಶ್ವರಂನಲ್ಲಿರುವ ತಮ್ಮ ಮನೆಯಲ್ಲೇ ಅವರು ಸರಳ ಜೀವನ ನಡೆಸುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News