ರೈತರ ಪ್ರತಿಭಟನೆ ಸ್ಥಳದಲ್ಲಿ ಗುಂಡು ಹಾರಾಟ: ಎಫ್ಐಆರ್ ದಾಖಲು

Update: 2021-03-08 16:21 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಮಾ.8: ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಹಲವು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಸ್ಥಳವಾದ ದಿಲ್ಲಿ-ಹರ್ಯಾಣ ಗಡಿಭಾಗದ ಸಿಂಘು ಪ್ರದೇಶದ ಬಳಿ ರವಿವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರವಿವಾರ ರಾತ್ರಿ ಸುಮಾರು 11 ಗಂಟೆಗೆ ಈ ಘಟನೆ ನಡೆದಿದೆ. ಕೆಲ ವ್ಯಕ್ತಿಗಳು ಲಂಗಾರ್ (ಸಮುದಾಯ ಪಾಕಶಾಲೆ)ನಲ್ಲಿ ಆಹಾರ ಸೇವಿಸುತ್ತಿದ್ದಾಗ ತಗಾದೆ ತೆಗೆದ ಬಳಿಕ ಘರ್ಷಣೆಗೆ ಇಳಿದಿದ್ದಾರೆ. ಬಳಿಕ ಕಾರಿನೊಳಗಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕಾರಿನ ಗುರುತು ಪತ್ತೆಯಾಗಿದ್ದು ಗುಂಡು ಹಾರಿಸಿದವರ ಮಾಹಿತಿ ಕಲೆ ಹಾಕುತ್ತಿದ್ದೇವೆ.

ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಐಪಿಸಿ ಸೆಕ್ಷನ್ 285( ಕ್ರಿಮಿನಲ್ ಉದ್ದೇಶದ ಕೃತ್ಯ) ಹಾಗೂ 506( ಬೆಂಕಿ ಅಥವಾ ದಹನಕಾರಿ ವಸ್ತುವಿನೊಂದಿಗೆ ನಿರ್ಲಕ್ಷದ ವರ್ತನೆ ) ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಕುಂಡ್ಲಿ ಪೊಲೀಸ್ ಠಾಣಾಧಿಕಾರಿ ರವಿ ಹೇಳಿದ್ದಾರೆ. ರೈತರ ಪ್ರತಿಭಟನೆ 100ನೇ ದಿನಕ್ಕೆ ಕಾಲಿರಿಸಿದ ಗುರುತಿಗಾಗಿ ಹೊಸದಿಲ್ಲಿಯ ಹೊರಭಾಗದಲ್ಲಿ , ದಿಲ್ಲಿ-ಹರ್ಯಾಣ ಸಂಪರ್ಕಿಸುವ 135 ಕಿ.ಮೀ ಉದ್ದದ ಕುಂಡ್ಲಿ-ಮನೆಸರ್-ಪಾಲ್ವಾಲ್ ಹೆದ್ದಾರಿಯ ಐದು ಕಡೆ ರೈತರು ಹೆದ್ದಾರಿ ತಡೆ ಆಂದೋಲನ ನಡೆಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News