ಪೊಲೀಸ್ ಠಾಣೆಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲು ರಾಜ್ಯಗಳಿಗೆ 200 ಕೋಟಿ ರೂ.: ಕೇಂದ್ರ ಗೃಹ ಸಚಿವಾಲಯ

Update: 2021-03-08 17:44 GMT

ಕೋಲ್ಕತಾ, ಮಾ. 8: ಪೊಲೀಸ್ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಹಾಗೂ ದೇಶದ ಎಲ್ಲ ಜಿಲ್ಲೆಗಳಲ್ಲಿ ಮಾನವ ಸಾಗಾಟ ವಿರೋಧಿ ಘಟಕವನ್ನು ಸಶಕ್ತಗೊಳಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 200 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಹೇಳಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಿಳೆಯ ಸಬಲೀಕರಣ ನರೇಂದ್ರ ಮೋದಿ ಸರಕಾರದ ನೀತಿಯ ಕೇಂದ್ರ ಬಿಂದು ಎಂದಿದ್ದಾರೆ.

‘‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಧೈರ್ಯ, ಶೌರ್ಯ ಹಾಗೂ ಬದ್ಧತೆಯನ್ನು ಪ್ರತಿನಿಧಿಸುವ ಮಹಿಳೆಯರ ಶಕ್ತಿಗೆ ತಲೆಬಾಗುತ್ತೇನೆ. ಮಹಿಳೆಯರ ಸಬಲೀಕರಣ ಮೋದಿ ಸರಕಾರದ ನೀತಿಯ ಕೇಂದ್ರ ಬಿಂದು. ಆತ್ಮ ನಿರ್ಭರ ಭಾರತ ಸಾಕಾರಗೊಳ್ಳಲು ಮಹಿಳಾ ಶಕ್ತಿ ಗಣನೀಯ ಕೊಡುಗೆ ನೀಡಿದೆ. ಇದು ಇಂದು ಹೆಮ್ಮೆ ಪಡಬೇಕಾದ ವಿಚಾರ’’ ಎಂದು ಅಮಿತ್ ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅನಂತರ ಗೃಹ ಸಚಿವಾಲಯದ ಹೇಳಿಕೆ, ದೇಶದಲ್ಲಿ ಮಹಿಳೆಯರ ಸುರಕ್ಷೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿರ್ಭಯಾ ನಿಧಿಯಿಂದ ಇದಕ್ಕೆ ಹಣ ಮಂಜೂರು ಮಾಡಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News