×
Ad

ಧನ್ ಸಿಂಗ್ ರಾವತ್ ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿ ಸಾಧ್ಯತೆ

Update: 2021-03-09 21:34 IST
Credit: Twitter/@drdhansinghuk

 

ಡೆಹ್ರಾಡೂನ್: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಶಾಸಕ ಧನ್ ಸಿಂಗ್ ರಾವತ್ ಅವರನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ಪ್ರಕಟಿಸುವ ಮೊದಲೇ ಧನ್ ಸಿಂಗ್ ಖಾಸಗಿ ಹೆಲಿಕಾಪ್ಟರ್ ನಲ್ಲಿ ರಾಜ್ಯ ರಾಜಧಾನಿ ಡೆಹ್ರಾಡೂನ್ ಗೆ ಧಾವಿಸಿದ್ದರು.

60ರ ವಯಸ್ಸಿನ ತ್ರಿವೇಂದ್ರ ಸಿಂಗ್ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರಿಗೆ  ಮಂಗಳವಾರ ರಾಜೀನಾಮೆ ಪತ್ರ ನೀಡಿದ್ದರು.  ಈಗ ಬೇರೊಬ್ಬರು ರಾಜ್ಯವನ್ನು ಮುನ್ನಡೆಸುವ ಕುರಿತು ಪಕ್ಷವು ಒಮ್ಮತದ ನಿರ್ಧಾರ ತೆಗೆದುಕೊಂಡಿದೆ ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದರು.

50ರ ವಯಸ್ಸಿನ ಧನ್ ಸಿಂಗ್ ಸದ್ಯ ರಾಜ್ಯ ಸಚಿವರಾಗಿದ್ದು, ಪೌರಿ ಜಿಲ್ಲೆಯ ಶ್ರೀನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಧನ್ ಸಿಂಗ್ ಇತಿಹಾಸ ಹಾಗೂ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯಶಾಸ್ತ್ರ  ವಿಷಯದಲ್ಲಿ ಪಿಎಚ್ ಡಿಯನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News