×
Ad

ಈ ವರ್ಷ ಗೌತಮ್ ಅದಾನಿ ಸಂಪತ್ತು ಏರಿಕೆ ಜಗತ್ತಿನಲ್ಲಿಯೇ ಗರಿಷ್ಠ: ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್

Update: 2021-03-12 16:56 IST
ಗೌತಮ್ ಅದಾನಿ

ಹೊಸದಿಲ್ಲಿ: ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಈ ವರ್ಷ ಜಗತ್ತಿನ ಇತರ ಯಾವುದೇ ಉದ್ಯಮಿಯ ಸಂಪತ್ತಿಗಿಂತಲೂ  ಗರಿಷ್ಠ ಏರಿಕೆ ಕಂಡಿದೆ ಎಂದು ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ. ಅದಾನಿ ಸಂಪತ್ತಿನ ಪಟ್ಟು ಮೌಲ್ಯ ಈ ವರ್ಷ 16.2 ಬಿಲಿಯನ್ ಡಾಲರಿನಷ್ಟು ಏರಿಕೆಯಾಗಿ 50 ಬಿಲಿಯನ್ ಡಾಲರ್ ತಲುಪಿದೆ ಎಂದು ವರದಿ ತಿಳಿಸಿದೆ. ಈ ಮೂಲಕ  ಸಂಪತ್ತು ಏರಿಕೆ ಪ್ರಮಾಣ ವಿಚಾರದಲ್ಲಿ ಗೌತಮ್  ಅದಾನಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಜೆಫ್ ಬೆಝೋಸ್ ಹಾಗೂ ಎಲಾನ್ ಮಸ್ಕ್ ಅವರನ್ನೂ ಹಿಂದಿಕ್ಕಿದ್ದಾರೆ.

ಅದಾನಿ ಸಮೂಹದ ಒಂದು ಸಂಸ್ಥೆಯ ಷೇರು ಮೌಲ್ಯ ಹೊರತುಪಡಿಸಿ ಇತರ ಎಲ್ಲಾ ಸಂಸ್ಥೆಗಳ ಷೇರು ಮೌಲ್ಯ ಈ ವರ್ಷ ಕನಿಷ್ಠ ಶೇ.50ರಷ್ಟು ಏರಿಕೆಯಾಗಿದೆ.

ಅತ್ತ ಏಷ್ಯಾದ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಸಂಪತ್ತು ಈ ವರ್ಷ 8.1 ಬಿಲಿಯನ್ ಡಾಲನಷ್ಟು ಏರಿಕೆ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News