×
Ad

ಥಾಯ್ಲೆಂಡ್: ಆ್ಯಸ್ಟ್ರಝೆನೆಕ ಲಸಿಕಾ ಕಾರ್ಯಕ್ರಮ ವಿಳಂಬ

Update: 2021-03-12 20:08 IST

 ಬ್ಯಾಂಕಾಕ್ (ಥಾಯ್ಲೆಂಡ್), ಮಾ. 12: ತನ್ನ ಕೋವಿಡ್-19 ಲಸಿಕಾ ಕಾರ್ಯಕ್ರಮದಲ್ಲಿ ಆ್ಯಸ್ಟ್ರಝೆನೆಕ ಲಸಿಕೆಯ ಸೇರ್ಪಡೆಯನ್ನು ಥಾಯ್ಲೆಂಡ್ ವಿಳಂಬಿಸಿದೆ. ಈ ಲಸಿಕೆ ಸ್ವೀಕರಿಸಿದ ಹಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಯುರೋಪ್ ದೇಶಗಳು ಲಸಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಬಳಿಕ ಥಾಯ್ಲೆಂಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.

‘‘ಆ್ಯಸ್ಟ್ರರೆುನೆಕ ಲಸಿಕೆಯ ಗುಣಮಟ್ಟ ಉತ್ತಮವಾಗಿದೆಯಾದರೂ, ಅದರ ಜಾರಿಯನ್ನು ವಿಳಂಬಗೊಳಿಸುವಂತೆ ಕೆಲವು ದೇಶಗಳು ಕೋರಿವೆ’’ ಎಂದು ಥಾಯ್ಲೆಂಡ್‌ನ ಕೋವಿಡ್-19 ಲಸಿಕೆ ಸಮಿತಿಯ ಸಲಹಾಕಾರ ಪಿಯಸಕೊಲ್ ಸಕೊಲ್ಸಟಯಡೋರ್ನ್ ಪತ್ರಿಕಾಗೋಷರಠಿಯಲ್ಲಿ ತಿಳಿಸಿದರು.

‘‘ಹಾಗೆಯೇ, ನಾವು ಕೂಡ ವಿಳಂಬಗೊಳಿಸುತ್ತಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News