ಏಶ್ಯನ್ ಅಮೆರಿಕನ್ನರ ಮೇಲಿನ ಜನಾಂಗೀಯ ದಾಳಿಯನ್ನು ಖಂಡಿಸಿದ ಬೈಡನ್

Update: 2021-03-12 14:46 GMT

ವಾಶಿಂಗ್ಟನ್, ಮಾ. 12: ಕೊರೋನ ವೈರಸ್ ಸಾಂಕ್ರಾಮಿಕ ಆರಂಬಗೊಂಡಂದಿನಿಂದ ಏಶ್ಯನ್ ಅಮೆರಿಕನ್ನರ ಮೇಲೆ ನಡೆಯುತ್ತಿರುವ ‘ಹೇಯ ದ್ವೇಷಾಪರಾಧ’ಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಖಂಡಿಸಿದ್ದಾರೆ. ಇಂಥ ಕೃತ್ಯಗಳು ಅಮೆರಿಕನ್ನರು ಮಾಡುವಂಥದ್ದಲ್ಲ ಎಂದು ಹೇಳಿದ ಅವರು, ಅವುಗಳು ಕೊನೆಗೊಳ್ಳಬೇಕೆಂದು ಒತ್ತಾಯಿಸಿದರು.

‘‘ಕೊರೋನ ವೈರಸ್ ಸಾಂಕ್ರಾಮಿಕದ ವಿಷಯದಲ್ಲಿ ಏಶ್ಯನ್ ಅಮೆರಿಕನ್ನರ ಮೇಲೆ ಆಕ್ರಮಣ ನಡೆಸಲಾಗಿದೆ, ಅವರಿಗೆ ಕಿರುಕುಳ ನೀಡಲಾಗಿದೆ, ಅವರ ವಿರುದ್ಧ ಆರೋಪವನ್ನು ಹೊರಿಸಲಾಗಿದೆ ಹಾಗೂ ಅವರನ್ನು ಬಲಿಪಶುಮಾಡಲಾಗಿದೆ’’ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

‘‘ಈಗಲೂ ನಮ್ಮ ಸಹಪ್ರಜೆಗಳಾದ ಏಶ್ಯನ್ ಅಮೆರಿಕನ್ನರು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಅವರು ಜನರ ಪ್ರಾಣಗಳನ್ನು ಕಾಪಾಡುತ್ತಿದ್ದಾರೆ. ಆದರೆ, ಅಮೆರಿಕದ ರಸ್ತೆಗಳಲ್ಲಿ ಅವರು ಜೀವ ಭಯದಿಂದ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ’’ ಎಂದು ಬೈಡನ್ ನುಡಿದರು.

‘‘ಇದು ತಪ್ಪು. ಇದು ಅಮೆರಿಕದ ಸಂಸ್ಕೃತಿಯಲ್ಲ. ಇದು ನಿಲ್ಲಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News