×
Ad

ಮೇ ತಿಂಗಳಲ್ಲಿ ಎರಡು ಹೊಸ ಐಪಿಎಲ್ ತಂಡಗಳ ಹರಾಜು

Update: 2021-03-13 23:29 IST
photo: bcci/ipl

ಹೊಸದಿಲ್ಲಿ: 2022ರ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ 10 ತಂಡಗಳು ಸೆಣಸಾಡಲಿವೆ. ಹೀಗಾಗಿ ಮುಂಬರುವ ಆವೃತ್ತಿಯ ಐಪಿಎಲ್ ನ  ಅಂತಿಮ ಹಂತದಲ್ಲಿ ಮೇ ತಿಂಗಳಲ್ಲಿ ಎರಡು ಹೊಸ ತಂಡಗಳನ್ನು ಹರಾಜು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಅಧ್ಯಕ್ಷ ಸೌರವ್ ಗಂಗುಲಿ, ಕಾರ್ಯದರ್ಶಿ ಜಯ ಶಾ ಸಹಿತ ಬಿಸಿಸಿಐ ಉನ್ನತ ಅಧಿಕಾರಿಗಳು ಶನಿವಾರ ಸಭೆ ನಡೆಸಿ ವರ್ಷಾರಂಭದಲ್ಲಿ ಐಪಿಎಲ್ ಆಡಳಿತ ಮಂಡಳಿ ಅನುಮೋದಿಸಿರುವ  ಹಲವು ನೀತಿ ನಿರ್ಧಾರಗಳ ಕುರಿತು ಚರ್ಚಿಸಿದರು.

10 ತಂಡಗಳ ಐಪಿಎಲ್ ಟೂರ್ನಿಯು ಮುಂದಿನ ವರ್ಷದಿಂದ ಆರಂಭವಾಗಲಿದೆ.ಈ ವರ್ಷದ ಮೇ ತಿಂಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆ, ಹೊಸ ಫ್ರಾಂಚೈಸಿಗಳ ಅಂತಿಮಗೊಳಿಸುವಿಕೆ ಪೂರ್ಣವಾಗಲಿದೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News