ಎನ್‍ಐಟಿ ತಿರುಚ್ಚಿ ಆಯೋಜನೆಯ 'ಪ್ರಗ್ಯಾನ್ 2021' ಮಾರ್ಚ್ 25ರಿಂದ ಆರಂಭ
ಎನ್‍ಐಟಿ ತಿರುಚ್ಚಿ ಆಯೋಜಿಸುವ ವಾರ್ಷಿಕ ಅಂತಾರಾಷ್ಟ್ರೀಯ ಟೆಕ್ನೋ-ಮ್ಯಾನೆಜೀರಿಯಲ್ ಫೆಸ್ಟ್ `ಪ್ರಗ್ಯಾನ್-2021' ಮಾರ್ಚ್ 25ರಿಂದ ಎಪ್ರಿಲ್ 11ರವರೆಗೆ ಜರುಗಲಿದೆ. ಈ ಬಾರಿ ಈ ಫೆಸ್ಟ್ ವರ್ಚುವಲ್ ಆಗಿ ನಡೆಯಲಿದ್ದು ಹಲವಾರು ಕಾರ್ಯಕ್ರಮಗಳು, ಕಾರ್ಯಾಗಾರಗಳು, ಅತಿಥಿ ಉಪನ್ಯಾಸಗಳು ಹಾಗೂ ಚರ್ಚೆಗಳು ನಡೆಯಲಿವೆ.
ಈ ವರ್ಷದ ಫೆಸ್ಟ್ ಭಾಗವಾಗಿ ಬೈಟೆಹೊಕ್, ಕನ್ಸೆಪ್ಶನ್, ಕಂಕ್ರಿಯೇಟ್, ಇವಿಟ್ಸ್, ಮನಿಗ್ಮಾ, ಪಂಡೋರಾಸ್ ಬಾಕ್ಸ್, ಫ್ರೊನೆಸಿಸ್ ಹಾಗೂ ರೊಬೊರೆಕ್ಸ್ ಕ್ಲಸ್ಟರ್ ರಚಿಸಲಾಗಿದ್ದು ಪ್ರಗ್ಯಾನ್ ಪ್ರೀಮಿಯರ್ ಲೀಗ್, ಸರ್ಕಿಟ್ರಿಕ್, ಟೌನ್ ಟ್ರೇಸ್, ಶೆರ್ಲಾಕ್ಡ್, ಕೋಡ್ ವಾರ್ಸ್ ಮತ್ತಿತರ ಕಾರ್ಯಕ್ರಮಗಳು ಈ ಬಾರಿ ನಡೆಯಲಿವೆ.
ಫೆಸ್ಟ್ ಅಂಗವಾಗಿ ಅನಿಮೇಶನ್ ಸಾಫ್ಟ್‍ವೇರ್, ಮಹೀಂದ್ರ ಇಲೆಕ್ಟ್ರಿಕ್ ವಾಹನಗಳು, ಸಿಕ್ಸ್-ಸಿಗ್ಮಾ, ಯೆಲ್ಲೋ ಬೆಲ್ಟ್ ಹಾಗೂ ಡಾಟಾ ಅನಾಲಿಟಿಕ್ಸ್ ಕುರಿತ ಕಾರ್ಯಾಗಾರಗಳು ನಡೆಯಲಿವೆ.
ಈ ಬಾರಿ ಇಲ್ಲುಮಿನೇರ್ ಎಂಬ ಆನ್ಲೈನ್ ಉಪನ್ಯಾಸ ಸರಣಿ ನಡೆಯಲಿದ್ದು ಆವಿಷ್ಕಾರ, ಸುಸ್ಥಿರತೆ, ಸೈಬರ್ ಸುರಕ್ಷತೆ, ನೆಕ್ಸ್ಟ್ ಜನರೇಶನ್ ರೋಗ ಪ್ರತಿಬಂಧಕಗಳು, ಕೃತಕ ಬುದ್ಧಿಮತ್ತೆ, ವರ್ಚುವಲ್ ರಿಯಾಲಿಟಿ ಮುಂತಾದ ವಿಚಾರಗಳ ಕುರಿತು ಉಪನ್ಯಾಸಗಳನ್ನು ತಜ್ಞರು ನೀಡಲಿದ್ದಾರೆ. ಕ್ರಾಸ್‍ಫಯರ್ ಎಂಬ ಚರ್ಚಾಗೋಷ್ಠಿಯೂ ನಡೆಯಲಿದೆ.
ಎನ್‍ಐಟಿ ತಿರುಚ್ಚಿಯ ವಾರ್ಷಿಕ ಅಂತಾರಾಷ್ಟ್ರೀಯ ಟೆಕ್ನೋ ಮ್ಯಾನೆಜೀರಿಯಲ್ ಫೆಸ್ಟ್ ಆಗಿರುವ `ಪ್ರಗ್ಯಾನ್' ಐಎಸ್‍ಒ 9001 ಹಾಗೂ 20121 ಪ್ರಮಾಣೀಕೃತವಾಗಿದೆ. 2005ರಲ್ಲಿ ಆರಂಭಗೊಂಡಂದಿನಿಂದ ದೇಶದ ವಿವಿಧ ಭಾಗಗಳ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.