ಅಡ್ಡೂರು : ಕುಡಿಯುವ ನೀರಿನ ಬಾವಿ ಯೋಜನೆಗೆ ಚಾಲನೆ

Update: 2021-03-16 15:14 GMT

ಗುರುಪುರ, ಮಾ.16: ಗುರುಪುರ ಗ್ರಾಪಂನ ಅಡ್ಡೂರು ಗ್ರಾಮದ ಕೆಳಗಿನಕೆರೆಯಲ್ಲಿ ಜಿಪಂನಿಂದ ಮಂಜೂರಾಗಿರುವ 5 ಲಕ್ಷ ರೂ. ಅನುದಾನ ದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಕುಡಿಯುವ ನೀರಿನ ಬಾವಿ ಯೋಜನೆಗೆ ಮಂಗಳವಾರ ಜಿಪಂ ಸದಸ್ಯ ಯುಪಿ ಇಬ್ರಾಹಿಂ ಚಾಲನೆ ನಡೆಸಿದರು. ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಶರೀಫ್ ದಾರಿಮಿ ದುಆಗೈದರು.

‘ಬಾವಿ ಯೋಜನೆ ಕಾರ್ಯಗತಗೊಂಡಾಗ ಅಡ್ಡೂರು ಕೇಂದ್ರೀಕರಿಸಿ ಸುತ್ತಲ ಕುಚ್ಚಿಗುಡ್ಡೆ, ಟಿಬೆಟ್, ಕೆಳಗಿನಕೆರೆ ಪ್ರದೇಶಗಳ ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದರೊಂದಿಗೆ ಬಹುದಿನಗಳ ಕನಸೊಂದು ನನಸಾಗಲಿದೆ’’ ಎಂದು ಯು ಪಿ ಇಬ್ರಾಹಿಂ ಹೇಳಿದರು.

ಅಡ್ಡೂರು ಜುಮಾ ಮಸೀದಿ ಉಪಾಧ್ಯಕ್ಷ ಡಿ ಎಸ್ ರಫೀಕ್ ತಾಪಂ ಸದಸ್ಯ ಸಚಿನ್ ಅಡಪ, ಪಂಚಾಯತ್ ಸದಸ್ಯರಾದ ಎ ಕೆ ಅಶ್ರಫ್, ದಾವೂದ್, ಮಾಜಿ ಅಧ್ಯಕ್ಷೆ ರುಕಿಯಾ, ಮಾಜಿ ಸದಸ್ಯರಾದ ಅಹ್ಮದ್ ಬಾವ, ರಝಿಯಾ, ಎ ಕೆ ಮುಹಮ್ಮದ್, ಸ್ಥಳದಾನ ಮಾಡಿರುವ ಇಸುಬು ಕೆಳಗಿನಕೆರೆ ಹಾಗೂ ಸಹೋದರರು, ಗುತ್ತಿಗೆದಾರ ಜಾನ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News