×
Ad

ಶೌಚಗುಂಡಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತ್ಯು

Update: 2021-03-17 11:17 IST

ಆಗ್ರಾ: ಆಗ್ರಾದ ಫತೇಹಾಬಾದ್ ಪ್ರದೇಶದಲ್ಲಿ ಮಂಗಳವಾರ ಶೌಚಗುಂಡಿಯಲ್ಲಿ ಮೂವರು ಅಪ್ರ್ರಾಪ್ತ ಸಹೋದರರು ಹಾಗೂ ಇನ್ನಿಬ್ಬರು ಮುಳುಗಿ ಮತಪಟ್ಟಿದ್ದಾರೆ. ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಓರ್ವ ನೆರೆಮನೆಯವನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಬಬ್ಲು ಕುಮಾರ್ ಅವರ ಪ್ರಕಾರ,ಫತೇಹಾಬಾದ್ ಪೊಲೀಸ್ ಠಾಣೆ ಪ್ರದೇಶದ ಪ್ರತಾಪ್ಪುರ ಗ್ರಾಮದಲ್ಲಿ 10 ವರ್ಷದ ಅನುರಾಗ್ ಆಡುವಾಗ 15 ಅಡಿ ಆಳದ ಮಲಗುಂಡಿಗೆ ಬಿದ್ದು ಈ ಘಟನೆ ನಡೆದಿದೆ.

ಸೋನು(25), ರಾಮ್ ಖಿಲಾಡಿ, ಹರಿಮೋಹನ್(16) ಹಾಗೂ ಅವಿನಾಶ್(12) ಎಂದು ಗುರುತಿಸಲ್ಪಟ್ಟ ಇತರರು ಅನುರಾಗ್ ನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾಗ ಮುಳುಗಿದ್ದಾರೆ.

ಹರಿಮೋಹನ್, ಅವಿನಾಶ್ ಹಾಗೂ ಅನುರಾಗ್ ಸಹೋದರರಾಗಿದ್ದಾರೆ. ಸೋನು ಇವರ ಸಂಬಂಧಿಯಾಗಿದ್ದ. ರಾಮ್ ಖಿಲಾಡಿ ನೆರೆಮನೆಯವನಾಗಿದ್ದ. ಇವರೆಲ್ಲರೂ ಬಾಲಕನನ್ನು ರಕ್ಷಿಸಲು ಶೌಚಗುಂಡಿಗೆ ಇಳಿದಿದ್ದು, ಎಲ್ಲರೂ ಪ್ರಜ್ಞಾಹೀನರಾಗಿದ್ದರು.

ಇವರನ್ನು ಗ್ರಾಮಸ್ಥರು ಗುಂಡಿಯಿಂದ ಹೊರಗೆ ತೆಗೆದಿದ್ದಾರೆ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕ ಮೊದಲಿಗೆ ಸಾವನ್ನಪ್ಪಿದರೆ, ಉಳಿದ ನಾಲ್ವರು ಎಸ್ ಎನ್ ಮೆಡಿಕಲ್ ಕಾಲೇಜಿಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News