ನೈಜರ್: ಗ್ರಾಮಸ್ಥರ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಯ ದಾಳಿ, 58 ಮಂದಿ ಬಲಿ

Update: 2021-03-17 08:08 GMT

ನಿಯಾಮಿ: ನೈಋತ್ಯ ನೈಜರ್ ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ವಾರಕ್ಕೊಮ್ಮೆ ನಡೆಯುವ ಮಾರುಕಟ್ಟೆಯಿಂದ ಹಿಂದಿರುತ್ತಿದ್ದ ಬೆಂಗಾವಲು ವಾಹನವನ್ನು ತಡೆದು ಹತ್ತಿರದ ಹಳ್ಳಿಯ ಜನರ ಮೇಲೆ ದಾಳಿ ನಡೆಸಿ ಕನಿಷ್ಟ 58  ಜನರನ್ನು ಕೊಂದಿದ್ದಾನೆ ಎಂದು ಸರಕಾರ ತಿಳಿಸಿದೆ.

ಮಾಲಿ ಹಾಗೂ ಬುರ್ಕಿನಾ ಫಾಸೊ ಗಡಿಯ ಸಮೀಪವಿರುವ ಟಿಲ್ಲಾಬರಿ ವಲಯದಲ್ಲಿ ಸೋಮವಾರ ಈ ದಾಳಿ ನಡೆದಿದೆ.

ಚೀನಾಗೋಡರ್ ಹಾಗೂ ಡೇರಿ ಡೇ ಗ್ರಾಮಗಳಿಗೆ ಮಾರುಕಟ್ಟೆಯಿಂದ ಪ್ರಯಾಣಿಕರನ್ನು ಸಾಗಿಸುತ್ತಿದ್ದ 4 ವಾಹನಗಳನ್ನು ಹಂತಕ ತಡೆದಿದ್ದಾನೆ ಎಂದು ಸರಕಾರವು ಮಂಗಳವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ. 

ದೇಶದ ಇತ್ತೀಚೆಗಿನ ಇತಿಹಾಸದಲ್ಲಿ ಮಾರಕ ಘಟನೆಯಲ್ಲಿ ಒಂದಾದ ಟಿಲ್ಲಾಬೆರಿಯ ಎರಡು ಹಳ್ಳಿಗಳ ಮೇಲೆ ಶಂಕಿತ ಉಗ್ರರು ಜನವರಿ 2ರಂದು ನಡೆಸಿದ್ದ ದಾಳಿಯಲ್ಲಿ ಕನಿಷ್ಠ 100 ನಾಗರಿಕರನ್ನು ಕೊಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News