ಮಿಗ್-21 ವಿಮಾನ ಪತನ: ವಾಯುಪಡೆಯ ಪೈಲಟ್ ಮೃತ್ಯು
Update: 2021-03-17 14:25 IST
ಹೊಸದಿಲ್ಲಿ: ಮಿಗ್-21 ಬೈಸನ್ ವಿಮಾನ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಎ. ಗುಪ್ತಾ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆ ಇಂದು ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಯುದ್ಧ ತರಬೇತಿ ಕಾರ್ಯಾಚರಣೆಗೆ ವಿಮಾನ ಹೊರಟ್ಟಿದ್ದಾಗ ಈ ಅಪಘಾತ ಸಂಭವಿಸಿದೆ.
ವಾಯುಪಡೆಯ ಹೇಳಿಕೆಯು ವಾಯುನೆಲೆಯ ಸ್ಥಳವನ್ನು ಬಹಿರಂಗಪಡಿಸಿಲ್ಲ.
ಘಟನೆಯ ಬಗ್ಗೆ ಐಎಎಫ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ನಿರ್ಧರಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.