×
Ad

ಶೇ.60ರಷ್ಟು ಸಕ್ರಿಯ ಕೊರೋನ ಪ್ರಕರಣಗಳು ಈ ರಾಜ್ಯದಲ್ಲಿದೆ

Update: 2021-03-17 17:05 IST

ಹೊಸದಿಲ್ಲಿ: ದೇಶದ ಸಕ್ರಿಯ ಕೊರೋನ ಪ್ರಕರಣಗಳ ಶೇ.60ರಷ್ಟು, ಶೇ.46.2ರಷ್ಟು ಹೊಸ ಸಾವಿನ ಕೇಸ್ ಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರೋನ ವೈರಸ್ ನ ಎರಡನೇ ಅಲೆಯನ್ನು ಆರಂಭದಲ್ಲಿ ನಿಯಂತ್ರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ  ದಿನದಂದೇ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದೆ.

ಮಹಾರಾಷ್ಟ್ರವೊಂದರಲ್ಲೇ ಶೇ.61.8ರಷ್ಟು ದೈನಂದಿನ ಪ್ರಕರಣಗಳು ವರದಿಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 17,864 ಕೇಸ್ ಗಳು ವರದಿಯಾಗಿವೆ. ಮಹಾರಾಷ್ಟ್ರದ ಬಳಿಕ ಕೇರಳದಲ್ಲಿ 1,970  ಪ್ರಕರಣಗಳು ಹಾಗೂ ಪಂಜಾಬ್ ನಲ್ಲಿ 1463 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾರ್ಚ್ 1ರಂದು ಮಹಾರಾಷ್ಟ್ರದಲ್ಲಿ ಪಾಸಿಟಿವಿಟಿ ರೇಟ್ ಶೇ.11ರಷ್ಟಿತ್ತು. ಆದರೆ, ಈಗ ಶೇ.16ರಷ್ಟು ಏರಿಕೆಯಾಗಿದೆ. ದೈನಂದಿನ ಕೇಸ್ ಗಳು ಹೆಚ್ಚಾಗುತ್ತಿವೆ. ಆದರೆ, ಟೆಸ್ಟ್ ಗಳು ನಡೆಯುತ್ತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News