ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 4 ಸಿಕ್ಸರ್ ಸಿಡಿಸಿದ ಯುವರಾಜ್,ಇಂಡಿಯಾ ಲೆಜೆಂಡ್ಸ್ ಫೈನಲ್ ಗೆ

Update: 2021-03-17 18:02 GMT
ಸಚಿನ್ ತೆಂಡುಲ್ಕರ್-ಯುವರಾಜ್ ಸಿಂಗ್

ರಾಯ್ಪುರ: ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟ್ವೆಂಟಿ-20 ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ 12 ರನ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಫೈನಲ್ ಗೆ ತಲುಪಿದೆ.

ಬುಧವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಡಿಯಾ ಲೆಜೆಂಡ್ಸ್ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಸಚಿನ್ ತೆಂಡುಲ್ಕರ್ 65 ರನ್(42 ಎಸೆತ, 6 ಬೌಂಡರಿ, 3 ಸಿಕ್ಸರ್) ಸಿಡಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮಹೇಂದ್ರ ನಗಾಮೂಟೂ ಅವರ 19ನೇ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಹಿತ ಒಟ್ಟು 4 ಸಿಕ್ಸರಗಳನ್ನು ಸಿಡಿಸಿದ ಯುವರಾಜ್ ಸಿಂಗ್(49, 20 ಎಸೆತ, 1 ಬೌಂಡರಿ, 6 ಸಿಕ್ಸರ್)ತಂಡದ ಪರ 2ನೇ ಗರಿಷ್ಟ ಸ್ಕೋರ್ ಗಳಿಸಿದರು. ಯೂಸುಫ್ ಪಠಾಣ್ (37, 20 ಎಸೆತ), ವೀರೇಂದ್ರ ಸೆಹ್ವಾಗ್ (35, 17 ಎಸೆತ), ಮುಹಮ್ಮದ್ ಕೈಫ್ (27, 21 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.

ಗೆಲ್ಲಲು 219 ರನ್ ಗುರಿ ಪಡೆದ ವೆಸ್ಟ್ಇಂಡೀಸ್ ಲೆಜೆಂಡ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿಂಡೀಸ್ ಪರ ಡ್ವೆಯ್ನ್ ಸ್ಮಿತ್(63) ಹಾಗೂ ನರಸಿಂಗ್ ದೇವ್ ನರೇನ್(59)ಅರ್ಧಶತಕ ಸಿಡಿಸಿದರು. ಬ್ರಿಯಾನ್ ಲಾರಾ(46) ಎರಡಂಕೆಯ ಕೊಡುಗೆ ನೀಡಿದರು. ಇಂಡಿಯಾ ಪರ ವಿನಯಕುಮಾರ್(2-26)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News