ಆಲ್ ಇಂಗ್ಲೆಂಡ್ ಓಪನ್: ರೋಚಕ ಜಯದೊಂದಿಗೆ ಸೆಮಿಫೈನಲ್ ತಲುಪಿದ ಸಿಂಧು

Update: 2021-03-20 09:40 GMT

ಲಂಡನ್: ಬರ್ಮಿಂಗ್‍ಹ್ಯಾಮ್ ನಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಅಕಾನೆ ಯಮಗುಚಿ ವಿರುದ್ದ ರೋಚಕ ಜಯ ಸಾಧಿಸಿರುವ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸೆಮಿ ಫೈನಲ್ ತಲುಪಿದ್ದಾರೆ.

ಪ್ರತಿಷ್ಟಿತ ಸೂಪರ್ 1000 ಸ್ಪರ್ಧೆಯಲ್ಲಿ ಸಿಂಧು ಎರಡನೇ ಬಾರಿ ಸೆಮಿಫೈನಲ್ ತಲುಪಿದ್ದಾರೆ.

76 ನಿಮಿಷಗಳಲ್ಲಿ ಕೊನೆಗೊಂಡ ಅಂತಿಮ-8ರ ಪಂದ್ಯದಲ್ಲಿ ಮೊದಲ ಗೇಮ್ ನ್ನು 21-16 ಅಂತರದಿಂದ ಜಯ ಸಾಧಿಸಿದ್ದ ಯಮಗುಚಿ ಅವರು ಉಳಿದೆರಡು ಗೇಮ್ ಗಳನ್ನು 16-21, 19-21 ಅಂತರದಿಂದ ಸೋತಿದ್ದಾರೆ.

ಆರನೇ ಶ್ರೇಯಾಂಕದ ಪಾರ್ನ್ ಪಾವೀ ಚೊಚುವಾಂಗ್ ಸೆಮಿ ಫೈನಲ್ ನಲ್ಲಿ ಸಿಂಧುಗೆ ಎದುರಾಗಲಿದ್ದಾರೆ.ಥಾಯ್ಲೆಂಡ್ ಆಟಗಾರ್ತಿ ಚೊಚುವಾಂಗ್ ವಿರುದ್ದ ಸಿಂಧು ಅವರು 4-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.

ಬಿಡಬ್ಲು ಎಫ್ ಟೂರ್ ನಲ್ಲಿ ಸಿಂಧು ಹಾಗೂ ಯಮಗುಚಿ 18ನೇ ಬಾರಿ ಮುಖಾಮುಖಿಯಾಗಿದ್ದರು. ಈ ಗೆಲುವಿನ ಮೂಲಕ ಹೆಡ್ ಟು ಹೆಡ್ ದಾಖಲೆಯನ್ನು 11-7ಕ್ಕೆ ವಿಸ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News