ಟ್ವೆಂಟಿ-20 ಕ್ರಿಕೆಟ್.: ಕೆ. ಎಲ್. ರಾಹುಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2021-03-21 13:11 GMT

ಹೊಸದಿಲ್ಲಿ: ಟ್ವೆಂಟಿ-20 ಸರಣಿಗಿಂತ ಮೊದಲು ಕಳಪೆ ಫಾರ್ಮ್ ನಲ್ಲಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ  ಸರಣಿಯ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು.  ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಉಳಿದ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ ಕಳಪೆ ಫಾರ್ಮ್ ನಿಂದ ಹೊರ ಬಂದರು.

ಕೊಹ್ಲಿ ಸರಣಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 3 ಅರ್ಧಶತಕಗಳ ಸಹಿತ ಒಟ್ಟು 231 ರನ್ ಗಳಿಸಿದರು. ಶನಿವಾರ 5ನೇ ಪಂದ್ಯದಲ್ಲಿ ಔಟಾಗದೆ 80 ರನ್ ಗಳಿಸಿದರು. ಕೊಹ್ಲಿ ಅವರ 2 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಭಾರತವು 20 ಓವರ್ ಗಳಲ್ಲಿ 224 ರನ್ ಗಳಿಸಿದ್ದು, ಇದು ಟಿ-20ಯಲ್ಲಿ ಭಾರತ ಗಳಿಸಿರುವ 4ನೇ ಗರಿಷ್ಠ ಸ್ಕೋರ್ ಆಗಿದೆ.

ಟಿ-20 ಕ್ರಿಕೆಟ್ ನಲ್ಲಿ ಟೆಸ್ಟ್ ಆಡುವ ದೇಶ ಒಳಗೊಂಡಿರುವ ದ್ವಿಪಕ್ಷೀಯ ಸರಣಿಯಲ್ಲಿ ಕೊಹ್ಲಿ ಒಟ್ಟು ಗರಿಷ್ಟ ಸ್ಕೋರ್(231)ಗಳಿಸಿದರು. ಈ ಮೂಲಕ ಕೆ.ಎಲ್. ರಾಹುಲ್ ದಾಖಲೆಯನ್ನು ಹಿಂದಿಕ್ಕಿದರು. ರಾಹುಲ್ 2020ರಲ್ಲಿ  ನ್ಯೂಝಿಲ್ಯಾಂಡ್ ವಿರುದ್ಧ ಭಾರತವು 5-0 ಅಂತರದಿಂದ ಗೆದ್ದ ಪಂದ್ಯದಲ್ಲಿ ಒಟ್ಟು 224 ರನ್ ಗಳಿಸಿದ್ದರು.

ಟೆಸ್ಟ್ ಆಡುವ ದೇಶ ಒಳಗೊಂಡಿರುವ ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ಗರಿಷ್ಟ ರನ್ ಗಳಿಸಿದವರು

ವಿರಾಟ್ ಕೊಹ್ಲಿ-2021ರಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 231 ರನ್

ಕೆ.ಎಲ್. ರಾಹುಲ್-2020ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 224 ರನ್

ಕಾಲಿನ್ ಮುನ್ರೊ- 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 223 ರನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News