ಗಾಂಜಾ ಮಾರಾಟ: ಓರ್ವನ ಬಂಧನ

Update: 2021-03-21 15:59 GMT

ಗಂಗೊಳ್ಳಿ, ಮಾ.21:  ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಗಂಗೊಳ್ಳಿ ಪೊಲೀಸರು ಹೊಸಾಡು ಗ್ರಾಮದ ಅರಾಟೆ ಸೇತುವೆ ಕೆಳಗಡೆ ಹೊಳೆಯ ಬದಿಯಲ್ಲಿ ಮಾ.20ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಕಟ್ಬೆಲ್ತೂರು ಗ್ರಾಮದ ಹರೇಗೋಡು ನಿವಾಸಿ ನಾಗರಾಜ ಮೊಗವೀರ (35) ಬಂಧಿತ ಆರೋಪಿ. ಈತನಿಂದ 16,500ರೂ. ಮೌಲ್ಯದ ಒಟ್ಟು 541 ಗ್ರಾಂ, 79 ಮಿಲಿ ಗ್ರಾಂ ತೂಕದ ಗಾಂಜಾ ಹಾಗೂ 1,500ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News