ಬರಾಅತ್, ಈದುಲ್ ಫಿತ್ರ್, ಈಸ್ಟರ್, ಹೋಳಿ ಹಬ್ಬ ಸಂದರ್ಭದಲ್ಲಿ ಜನ ಸೇರುವುದನ್ನು ನಿರ್ಬಂಧಿಸಿ ಗೃಹ ಇಲಾಖೆ ಆದೇಶ

Update: 2021-03-24 09:56 GMT

ಹೊಸದಿಲ್ಲಿ: ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಇದೀಗ ಸಾರ್ವಜನಿಕ ಹಬ್ಬಗಳಲ್ಲಿ ಜನದಟ್ಟಣೆಯ ಕುರಿತಾದಂತೆ ಗೃಹ ಇಲಾಖೆಯು ಆದೇಶ ಹೊರಡಿಸಿದೆ. ಈ ಕುರಿತಾದಂತೆ ಕೇಂದ್ರ ಆರೋಗ್ಯ ಹೆಚ್ಚುವರಿ ಕಾರ್ಯದರ್ಶಿಯು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು / ನಿರ್ವಾಹಕರಿಗೆ ಪತ್ರ ಬರೆದಿದ್ದಾರೆ ಎಂದು ANI ವರದಿ ಮಾಡಿದೆ.

ಆದೇಶದಲ್ಲಿ ತಿಳಿಸಿದಂತೆ "ಮುಂಬರುವ ಹೋಳಿ, ಶಬೇ ಬರಾಅತ್‌, ಬಿಹು, ಈಸ್ಟರ್‌, ಈದ್‌ ಉಲ್‌ ಫಿತ್ರ್‌ ಸೇರಿದಂತೆ ಜನದಟ್ಟನೆ ಉಂಟಾಗುವ ಹಬ್ಬಗಳ ಕುರಿತು ನಿಗಾ ವಹಿಸಬೇಕು. ಈ ಸಂದರ್ಭಗಳಲ್ಲಿ ಸೆಕ್ಷನ್‌ 22ರ ಅನ್ವಯ ಸ್ಥಳೀಯ ನಿರ್ಬಂಧಗಳನ್ನು ಹೇರಬಹುದು ಹಾಗೂ ಭಾಗವಹಿಸುವ ಜನರ ಸಂಖ್ಯೆಗಳನ್ನು ಕಡಿಮೆಗೊಳಿಸುವ ಕುರಿತು ಆದೇಶ ನೀಡಬಹುದು" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಮರ್ಪಕವಾದ ಕೋವಿಡ್‌ ನೀತಿ ನಿಯಮಗಳ ಪಾಲನೆಯಿಂದಾಗಿ ದೇಶದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ. ಮುಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಸರಿಯಾಗಿ ನಿಯಮಗಳನ್ನು ಪಾಲಿಸಬೇಕಾಗಿ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News