×
Ad

ತರುಣ್ ತೇಜ್‌ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣ: ಎಪ್ರಿಲ್ 27ರಂದು ತೀರ್ಪು ಘೋಷಣೆ

Update: 2021-03-24 21:58 IST

ಹೊಸದಿಲ್ಲಿ, ಮಾ. 24: ‘ತೆಹಲ್ಕಾ’ ಮ್ಯಾಗಝಿನ್‌ನ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧ 2013ರಲ್ಲಿ ದಾಖಲಿಸಲಾದ ಅತ್ಯಾಚಾರ ಪ್ರಕರಣದ ತೀರ್ಪನ್ನು ಗೋವಾದ ಸತ್ರ ನ್ಯಾಯಾಲಯ ಎಪ್ರಿಲ್ 27ರಂದು ಪ್ರಕಟಿಸಲಿದೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

2013ರಲ್ಲಿ ಗೋವಾದಲ್ಲಿ ‘ತೆಹಲ್ಕಾ’ ಮ್ಯಾಗಝಿನ್ ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭ ಪಂಚತಾರಾ ಹೊಟೇಲ್‌ನ ಇಲವೇಟರ್ ಒಳಗೆ ತನ್ನ ಸಹೋದ್ಯೋಗಿ ಪತ್ರಕರ್ತೆಯ ಮೇಲೆ ತರುಣ್ ತೇಜ್‌ಪಾಲ್ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ತರುಣ್ ತೇಜ್‌ಪಾಲ್ ಪ್ರಕರಣದ ಅಂತಿಮ ವಾದವನ್ನು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕ್ಷಮಾ ಜೋಷಿ ಮಾರ್ಚ್ 8ರಂದು ಆಲಿಸಿದ್ದರು ಹಾಗೂ ತೀರ್ಪಿನ ದಿನಾಂಕವನ್ನು ಎಪ್ರಿಲ್ 27ಕ್ಕೆ ನಿಗದಿಪಡಿಸಿದ್ದರು.

ಮಪುಸಾ ಪಟ್ಟಣದ ಉತ್ತರ ಗೋವಾ ಡಿಸ್ಟ್ರಿಕ್ಟ್ ಹಾಗೂ ಸತ್ರ ನ್ಯಾಯಾಲಯ ವಾದ ಆಲಿಸಿದ ಸಂದರ್ಭ 71 ಪ್ರಾಸಿಕ್ಯೂಷನ್ ಸಾಕ್ಷಿಗಳು ಹಾಗೂ ಐವರು ಪ್ರತಿವಾದಿ ಸಾಕ್ಷಿಗಳ ಪರಿಶೀಲನೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News