ಸಹಾಯಕ ಆರೋಗ್ಯ ಕಾರ್ಯದರ್ಶಿ ರೇಚಲ್ ಲವೀನ್ ನೇಮಕಕ್ಕೆ ಸೆನೆಟ್ ಅಂಗೀಕಾರ

Update: 2021-03-25 15:30 GMT
PHOTO: twitter.com/SecretaryLevine

ವಾಶಿಂಗ್ಟನ್, ಮಾ. 25: ವೈದ್ಯೆ ರೇಚಲ್ ಲವೀನ್‌ರನ್ನು ಅಮೆರಿಕದ ಸಹಾಯಕ ಆರೋಗ್ಯ ಕಾರ್ಯದರ್ಶಿಯಾಗಿ ಅಧ್ಯಕ್ಷ ಜೋ ಬೈಡನ್ ಮಾಡಿರುವ ನೇಮಕಾತಿಗೆ ಅಮೆರಿಕ ಸೆನೆಟ್ ಬುಧವಾರ ಅಂಗೀಕಾರ ನೀಡಿದೆ. ಇದರೊಂದಿಗೆ ಅವರು ಅಮೆರಿಕ ಸರಕಾರದ ಅತ್ಯುನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಲಿರುವ ಮೊದಲ ತೃತೀಯ ಲಿಂಗಿಯಾಗಿದ್ದಾರೆ.

ಪೆನ್ಸಿಲ್ವೇನಿಯ ರಾಜ್ಯದ ಆರೋಗ್ಯ ಇಲಾಖೆಯ ಮುಖ್ಯಸ್ಥರಾಗಿದ್ದ ಲವೀನ್‌ರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜನವರಿಯಲ್ಲಿ ಅಮೆರಿಕದ ಸಹಾಯಕ ಆರೋಗ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದರು.

ಈ ಆಯ್ಕೆಯು ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿಗಳಿಗೆ ವಿರುದ್ಧವಾಗಿತ್ತು. ಹಿಂದಿನ ಸರಕಾರವು ಎಲ್‌ಜಿಬಿಟಿಕ್ಯೂ ಸಮುದಾಯದ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿತ್ತು.

52-48 ಮತಗಳ ಅಂತರದಿಂದ ಲವೀನ್ ನೇಮಕಾತಿಗೆ ಸೆನೆಟ್ ಅಂಗೀಕಾರ ನೀಡಿತು. ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಎಲ್ಲ ಸಂಸದರು ಮತ್ತು ಪ್ರತಿಪಕ್ಷ ರಿಪಬ್ಲಿಕನ್ ಪಕ್ಷದ ಇಬ್ಬರು ಸಂಸದರು ನೇಮಕಾತಿಯ ಪರವಾಗಿ ಮತ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News