ಲಸಿಕೆ 76 ಶೇಕಡ ಪರಿಣಾಮಕಾರಿಯಾಗಿದೆ: ಆ್ಯಸ್ಟ್ರಝೆನೆಕ

Update: 2021-03-25 15:39 GMT

ವಾಶಿಂಗ್ಟನ್, ಮಾ. 25: ಅವೆುರಿಕದಲ್ಲಿ ನಡೆದ ಹೊಸ ಪ್ರಾಯೋಗಿಕ ಪರೀಕ್ಷೆಯಲ್ಲಿ, ತನ್ನ ಕೋವಿಡ್-19 ಲಸಿಕೆಯು 76 ಶೇಕಡ ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ ಎಂದು ಬ್ರಿಟನ್‌ನ ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿ ತಿಳಿಸಿದೆ.

ಈ ಸಂಖ್ಯೆಯು ಈ ವಾರದ ಆದಿ ಭಾಗದಲ್ಲಿ ಕಂಪೆನಿ ಘೋಷಿಸಿದ ಸಂಖ್ಯೆಗಿಂತ ಕಡಿಮೆಯಾಗಿದೆ. ತನ್ನ ಕೋವಿಡ್-19 ಲಸಿಕೆಯು 79 ಶೇಕಡ ಪರಿಣಾಮಕಾರಿಯಾಗಿದೆ ಎಂಬುದಾಗಿ ಕಂಪೆನಿಯು ಸೋಮವಾರ ಘೋಷಿಸಿತ್ತು. ಆದರೆ, ಆ ವಿಶ್ಲೇಷಣೆಯಲ್ಲಿ ಹಳೆಯ ಅಂಕಿ-ಸಂಖ್ಯೆಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಔಷಧದ ವಿಶ್ಲೇಷಣೆ ವೇಳೆ ತಾಜಾ ಅಂಕಿಸಂಖ್ಯೆಗಳನ್ನು ಬಳಸಿಕೊಳ್ಳದಿರುವುದಕ್ಕೆ ಅವೆುರಿಕದ ಆರೋಗ್ಯ ಅಧಿಕಾರಿಗಳು ಆ್ಯಸ್ಟ್ರಝೆನೆಕವನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News