ಶಿಥಿಲಗೊಂಡ ವಲಸೆ ವ್ಯವಸ್ಥೆ ಸುಧಾರಣೆಗೆ ಬೈಡನ್ ಉತ್ಸುಕ: ಶ್ವೇತಭವನ

Update: 2021-03-25 15:40 GMT

ವಾಶಿಂಗ್ಟನ್, ಮಾ. 25: ಶಿಥಿಲಗೊಂಡಿರುವ ವಲಸೆ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಸತ್ ಕಾಂಗ್ರೆಸ್ ಕಾರ್ಯಪ್ರವೃತ್ತಗೊಳ್ಳಬೇಕು ಎಂಬುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಯಸಿದ್ದಾರೆ ಹಾಗೂ ಇದಕ್ಕಾಗಿ ಈಗಾಗಲೇ ಅವರು ಮಸೂದೆಯೊಂದನ್ನು ರೂಪಿಸಿದ್ದಾರೆ ಎಂದು ಶ್ವೇತಭವನ ಬುಧವಾರ ತಿಳಿಸಿದೆ.

‘‘ನಮ್ಮ ವಲಸೆ ವ್ಯವಸ್ಥೆಯು ಹಲವು ಹಂತಗಳಲ್ಲಿ ಕುಸಿದು ಬಿದ್ದಿದೆ ಎಂಬುದಾಗಿ ಅಧ್ಯಕ್ಷರು ಭಾವಿಸಿದ್ದಾರೆ ಹಾಗೂ ಅದನ್ನು ಸರಿಪಡಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಅವರು ಮನಗಂಡಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಪ್ರವೃತ್ತಗೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅವರು ಬಯಸಿದ್ದಾರೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇತ್ತೀಚೆಗೆ ಭಾರತೀಯ-ಅಮೆರಿಕನ್ ವೈದ್ಯರು ಅಮೆರಿಕದಲ್ಲಿ ನಡೆಸಿದ ಧರಣಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು. ಅವೆುರಿಕದಲ್ಲಿ ಶಾಶ್ವತವಾಗಿ ವಾಸಿಸಲು ಅವಕಾಶ ನೀಡುವ ಗ್ರೀನ್ ಕಾರ್ಡ್ ವಿತರಣೆಯಲ್ಲಿ ದೇಶವಾರು ಕೋಟವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಅವರು ಧರಣಿ ನಡೆಸಿದ್ದರು. ದೇಶವಾರು ಕೋಟ ಮುಂದುವರಿದರೆ ತಮಗೆ ಗ್ರೀನ್ ಕಾರ್ಡ್ ಸಿಗಲು ದಶಕಗಳೇ ಬೇಕಾಗಬಹುದು ಎನ್ನುವುದು ಅವರ ಆತಂಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News