×
Ad

ಶನಿವಾರದಿಂದ ಎ.4ರವರೆಗೆ ಏಳು ದಿನ ಬ್ಯಾಂಕ್‌ಗಳು ಬಂದ್

Update: 2021-03-25 23:09 IST

ಹೊಸದಿಲ್ಲಿ, ಮಾ.25: ಬ್ಯಾಂಕ್ ಗ್ರಾಹಕರೇ ದಯವಿಟ್ಟು ಗಮನಿಸಿ, ನಿಮ್ಮ ಬ್ಯಾಂಕ್ ಕೆಲಸವೇನಿದ್ದರೂ ಶುಕ್ರವಾರವೇ ಮುಗಿಸಿಕೊಳ್ಳಿ, ಇಲ್ಲದಿದ್ದರೆ ಮುಂದಿನ ವಾರದ ಮಂಗಳವಾರದವರೆಗೂ ಕಾಯಬೇಕಾಗುತ್ತದೆ. ಶನಿವಾರದಿಂದ ಸತತ ಮೂರು ದಿನಗಳು ಬ್ಯಾಂಕ್‌ಗಳು ಬಂದ್ ಆಗಿರಲಿವೆ.

ಹೌದು, ಮಾ.27ರಿಂದ ಆರಂಭಗೊಂಡು ಎ.4ರವರೆಗಿನ ಒಂಭತ್ತು ದಿನಗಳಲ್ಲಿ ಕೇವಲ ಎರಡು ದಿನಗಳಿಗೆ ಮಾತ್ರ ಬ್ಯಾಂಕುಗಳು ಗ್ರಾಹಕರಿಗೆ ತೆರೆದುಕೊಳ್ಳಲಿವೆ. ಇತರ ದಿನಗಳಲ್ಲಿ ಗ್ರಾಹಕರು ಬ್ಯಾಂಕಿಗೆ ಹೋದರೆ ಮುಚ್ಚಿದ ಬಾಗಿಲು ನೋಡಿಕೊಂಡು ಮರಳಬೇಕಾಗುತ್ತದೆ.

ಇಲ್ಲಿದೆ ನೋಡಿ ಬ್ಯಾಂಕ್ ರಜೆಗಳ ಪಟ್ಟಿ:

ಮಾ.27: ಕೊನೆಯ ಶನಿವಾರ

ಮಾ.28: ರವಿವಾರ

ಮಾ.29: ಸೋಮವಾರ, ಹೋಳಿ ರಜೆ

ಮಾ.30: ಮಂಗಳವಾರ, ತೆರೆದಿರುತ್ತದೆ

ಮಾ.31: ಬುಧವಾರ, ವರ್ಷಾಂತ್ಯದ ರಜೆ

ಎ.1: ಗುರುವಾರ, ಬ್ಯಾಂಕ್ ಲೆಕ್ಕಗಳ ಮುಕ್ತಾಯದ ದಿನ

ಎ.2: ಶುಕ್ರವಾರ, ಗುಡ್ ಫ್ರೈಡೇ ರಜೆ

ಎ.3: ಶನಿವಾರ, ತೆರೆದಿರುತ್ತದೆ

ಎ.4: ರವಿವಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News