ಲವ್‌ ಜಿಹಾದ್‌, ಭೂ ಜಿಹಾದ್‌ ಗಳನ್ನು ನಿಲ್ಲಿಸಲು ಕಾನೂನು ರಚಿಸುತ್ತೇವೆ: ಅಸ್ಸಾಂನಲ್ಲಿ ಅಮಿತ್‌ ಶಾ

Update: 2021-03-26 09:56 GMT

ಗುವಾಹಟಿ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಸ್ಸಾಂನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಇತರ ವಿಷಯಗಳೊಂದಿಗೆ ಲವ್‌ ಜಿಹಾದ್ ಮತ್ತು ಭೂ ಜಿಹಾದ್ ನಿಲ್ಲಿಸಲು ಕಾನೂನುಗಳನ್ನು ತರುತ್ತದೆ ಎಂದು ಹೇಳಿದರು. ರಾಜ್ಯಾದ್ಯಂತ ಹರಡಿರುವ ನಾಮ್ಘರ್‌ (ದೇವಸ್ಥಾನ) ಸ್ಥಳಗಳ ಪುನರಾಭಿವೃದ್ಧಿಗಾಗಿ ತಲಾ 2.5ಲಕ್ಷ ರೂ. ನೀಡುವುದಾಗಿ ಅವರು ಘೋಷಿಸಿದ್ದಾರೆ.

ಅಸ್ಸಾಂನ ಕಮ್ರೂಪ್ ಜಿಲ್ಲೆಯಲ್ಲಿ ಮಾತನಾಡಿದ ಅಮಿತ್ ಶಾ, "ಬಿಜೆಪಿಯ ಪ್ರಣಾಳಿಕೆಯಲ್ಲಿ ಹಲವಾರು ವಿಚಾರಗಳಿವೆ. ಆದರೆ ಅವುಗಳಲ್ಲಿ ಅತಿ ಮಹತ್ವದ್ದೆಂದರೆ ಲವ್‌ ಜಿಹಾದ್ ಮತ್ತು ಭೂ ಜಿಹಾದ್ ವಿರುದ್ಧ ಕಾನೂನುಗಳನ್ನು ತರಲು ಬಿಜೆಪಿ ಸರ್ಕಾರ ಕೆಲಸ ಮಾಡುತ್ತದೆ‌" ಎಂದು ಅವರು ಹೇಳಿದರು.

ತಮ್ಮ ಪಕ್ಷವು ರಾಜ್ಯವನ್ನು ಆಂದೋಲನ-ಮುಕ್ತ ಮತ್ತು ಭಯೋತ್ಪಾದನೆ-ಮುಕ್ತವಾಗಿ ಪರಿವರ್ತಿಸಿದೆ ಮತ್ತು ಅದನ್ನು ಉದ್ಯೋಗ ಕೇಂದ್ರವಾಗಿ ಮತ್ತು ಪ್ರವಾಹ ಮುಕ್ತವಾಗಿಸುವ ಭರವಸೆ ನೀಡಿದರು. ಪ್ರತಿ ಬ್ಲಾಕ್‌ನಲ್ಲಿ ಬಿ.ಎಡ್ ಕಾಲೇಜುಗಳನ್ನು ನಿರ್ಮಿಸಲಾಗುವುದು ಮತ್ತು 2022 ರ ಮೊದಲು ಎರಡು ಲಕ್ಷ ಸರ್ಕಾರಿ ಶಾಲೆಗಳು ಮತ್ತು ಎಂಟು ಲಕ್ಷ ಖಾಸಗಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನೇತೃತ್ವದ ಬಿಜೆಪಿ ಅಸ್ಸಾಂನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News