ಗುಜರಾತ್: ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ರೈತ ಮುಖಂಡನ ಬಂಧಿಸಿದ ಪೊಲೀಸರು

Update: 2021-03-26 11:56 GMT

ಅಹಮದಾಬಾದ್: ನಗರದ ಮೊಟೆರಾ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ಪ್ರಧಾನ ಕಾರ್ಯದರ್ಶಿ ಯುಧ್ವೀರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿರುವ ಆಘಾತಕಾರಿ ವಿದ್ಯಮಾನ ನಡೆದಿದೆ.

ಇತರ ಮೂವರು ನಾಯಕರುಗಳಾದ ಜೆ.ಕೆ.ಪಟೇಲ್, ಗಜೇಂದ್ರ ಸಿಂಗ್ ಹಾಗೂ ರಂಜಿತ್ ಸಿಂಗ್ ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಇದು ತಪ್ಪು, ಇದೊಂದು ಸರ್ವಾಧಿಕಾರ. ಮಾಧ್ಯಮಗಳೊಂದಿಗೆ ಮಾತನಾಡುವುದು ಅಪರಾಧವಲ್ಲ. ಇದು ಪ್ರಜಾಪ್ರಭುತ್ವದ ಒಂದು ಹಕ್ಕು ಎಂದು ಯುಧ್ವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಯುಧ್ವೀರ್ ಸಿಂಗ್ ಅವರ ಪತ್ರಿಕಾಗೋಷ್ಠಿಯು ಎಪ್ರಿಲ್ 4 ಹಾಗೂ 5ರಂದು ಗುಜರಾತ್ ನಲ್ಲಿ ನಡೆಯಲಿರುವ ಮಹಾಪಂಚಾಯತ್ ಅಥವಾ ರೈತರ ಸಾಮೂಹಿಕ ಸಭೆಗೆ ಸಂಬಂಧಿಸಿದ್ದಾಗಿತ್ತು. ಬಂಧಿತ ನಾಯಕರನ್ನು ಈಗ ಅಹಮದಾಬಾದ್ ನ ಶಾಹಿಬಾಗ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News